ಕೊರೋನಾ ಸಂಕಷ್ಟದ ನಡುವೆ ರೈತರಿಗೆ ಬ್ಯಾಂಕ್ ನಿಂದ ನೋಟೀಸ್ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ : ಕೊರೋನಾ ಹಾವಳಿ- ಜನತಾ ಕರ್ಫ್ಯೂ ಇನ್ನು ಕೆಲವು ದಿನದಲ್ಲಿ ಲಾಕ್ ಡೌನ್ ಬರೆ ಬೀಳುವ ಹೊತ್ತಿನಲ್ಲಿ ಸಾಲ ಮರುಪಾವತಿಸುವಂತೆ ಬ್ಯಾಂಕ್ನಿಂದ ನೋಟಿಸ್ ಗಳು ಬರುತ್ತಿದ್ದು ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣ -ಸಕಲೇಶಪುರ -ಆಲೂರು ಸೇರಿದಂತೆ ಬಹುತೇಕ ತಾಲೂಕಿನಲ್ಲಿ ಕಾರ್ಪೊರೇಷನ್- ಕೆನರಾ ಬ್ಯಾಂಕ್ ಗಳಿಂದ ರೈತರ ಮನೆಗಳಿಗೆ ತೆರಳಿ ನೋಟಿಸ್ ಜಾರಿ ಮಾಡುತ್ತಿರುವ ಬ್ಯಾಂಕ್ ಸಿಬ್ಬಂದಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದ ರೈತರು ಕಣ್ಣೀರಿಡುತ್ತ ಹೇಳಿಕೆ ನೀಡಿದ್ದಾರೆ .

ರಾಜ್ಯದಲ್ಲಿ ರೈತ ಪರ ಸರ್ಕಾರವಿದೆ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಾರೆ ಆದರೆ ಸಾಲದ ಸುಳಿಗೆ ಸಿಲುಕಿರುವ ನಮಗೆ ಬ್ಯಾಂಕ್ ನಿಂದ ಸಾಲ ತೀರಿಸಲು ನೋಟೀಸ್ ಮೇಲೆ ನೋಟೀಸ್ ಜಾರಿ ಮಾಡಲಾಗುತ್ತಿದೆ ಈ ನಡುವೆ… ದಿಕ್ಕುತೋಚದಂ ತಾಗಿದೆ.ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ… ಅತಿವೃಷ್ಟಿ ಅನಾವೃಷ್ಟಿಯಿಂದ ಬೆಳೆ ನಷ್ಟವಾಗಿದೆ ಇಷ್ಟೆಲ್ಲಾ ನೋವುಗಳಿದ್ದರು ಜೀವನ ಸಾಗಿಸುವುದೇ ಕಷ್ಟವಾಗಿದೆ.

ಈ ನಡುವೆ ಕೊರೋನಾ ಹಾವಳಿ ಜನತಾ ಕರ್ಫ್ಯೂ ಎಂಬ ಬರೆ ಬಿದ್ದಿದೆ.. ಇಂತಹ ಸಮಯದಲ್ಲಿ ಬ್ಯಾಂಕ್ನಿಂದ ನೋಟಿಸ್ ಜಾರಿ ಮಾಡುತ್ತಿರುವುದು ಎಷ್ಟು ಸರಿ ಎಂದು ನೊಂದ ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ. ಈಗಾಗಲೇ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಜನರಿಗೆ ನೋಟಿಸ್ ಜಾರಿ ಮಾಡಿರುವ ಬ್ಯಾಂಕ್ ಸಿಬ್ಬಂದಿಗಳು ಮರುಪಾವತಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ .

ಸಕಲೇಶಪುರ ಭಾಗದಲ್ಲಿ ಆನೆ ಹಾವಳಿಯಿಂದ ವಿಪರೀತ ಕಾಫಿ, ಭತ್ತ ,ಬಾಳೆ, ಶುಂಠಿ ‌ ನಷ್ಟ ಉಂಟಾಗುತ್ತಿದೆ. ಕಾಫಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಕಾರ್ಮಿಕರ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕಾಫಿ ಬೆಳಗಾರರಿಗೂ ಸಹ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಕಾಫಿ ತೋಟದ ಮಾಲೀಕರು ಸಹ ತಮ್ಮ ನೋವು ತೋಡಿಕೊಂಡಿದ್ದಾರೆ.

ನನ್ನ ಮಗ ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಆತ್ಮಹತ್ಯೆಗೆ ಶರಣಾದ ಮಗನ ಸಾಲಕ್ಕೆ ನಮಗೆ ನೋಟಿಸ್ ನೀಡಿದ್ದು ಹೀಗಾದರೆ ನಾವು ಬದುಕುವುದು ಹೇಗೆ ಎಂದು ಮೃತನ ತಾಯಿ ಕಣ್ಣೀರಿನ ಮನವಿ ಮಾಡಿದ್ದಾರೆ . ಸರ್ಕಾರ ಕೂಡಲೇ ನಮ್ಮ ನೆರವಿಗೆ ಬರಬೇಕು ಹಾಗೂ ಬ್ಯಾಂಕ್ ಸಾಲವನ್ನು ಮನ್ನಾ ಮಾಡಬೇಕು ಎಂದು ರೈತರು ಕೋರಿದ್ದಾರೆ.

Facebook Comments

Sri Raghav

Admin