ನಿಯಮ ಬಾಹಿರವಾಗಿ 2 ಕೋಟಿ ಹಣ ಸಾಗಿಸಿದ ಬ್ಯಾಂಕ್ ಸಿಬ್ಬಂದಿ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ನ.30- ನಿಯಮ ಬಾಹಿರವಾಗಿ ಎರಡು ಕೋಟಿ ಹಣ ಸಾಗಿಸಿದ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಸೀನಿಯರ್ ಅಸಿಸ್ಟೆಂಟ್ ಚೇತನ್‍ಬಾಬು ಅವರನ್ನು ಕರ್ತವ್ಯಲೋಪ ಮಾಡಿದ್ದಕ್ಕಾಗಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅಮಾನತುಗೊಳಿಸಿದ್ದಾರೆ.

ರಿಸರ್ವ್ ಬ್ಯಾಂಕ್‍ನ ನಿಯಮದಂತೆ ಒಂದು ಬ್ರಾಂಚ್‍ನಿಂದ ಮತ್ತೊಂದು ಬ್ರಾಂಚ್‍ಗೆ ಹೆಚ್ಚು ಮೊತ್ತದ ಹಣ ತೆಗೆದುಕೊಂಡು ಹೋಗುವಾಗ ಅನುಸರಿಸಬೇಕಾದ ಕ್ರಮವನ್ನು ಕೈಗೊಳ್ಳದ ಕಾರಣ ಹುಣಸೂರು ತಾಲ್ಲೂಕು ಮನುಗನಹಳ್ಳಿ ಚೆಕ್‍ಫೋಸ್ಟ್ ಬಳಿ ಚುನಾವಣಾಧಿಕಾರಿಗಳು 2 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಬ್ಯಾಂಕ್ ಅಧ್ಯಕ್ಷರಿಗಾಗಲಿ ಹಗೂ ಬ್ಯಾಂಕ್ ಅಧಿಕಾರಿಗಳಿಗಾಗಲಿ ಚೇತನ್‍ಬಾಬು ಮಾಹಿತಿ ನೀಡಿರಲಿಲ್ಲ.

ನಿಯಮ ಉಲ್ಲಂಘಿಸಿ 2 ಕೋಟಿ ಹಣವನ್ನು ಮೈಸೂರಿನಿಂದ ಪಿರಿಯಾಪಟ್ಟಣದಲ್ಲಿರುವ ಎಂಡಿಸಿಸಿ ಬ್ಯಾಂಕ್‍ಗೆ ಸಾಗಿಸಲಾಗುತ್ತಿತ್ತು.ಈ ಹಣವನ್ನು ದಾಖಲೆ ಇಲ್ಲದ ಕಾರಣ ಚುನಾವಣಾಧಿಕಾರಿಗಳು ವಶಪಡಿಸಿಕೊಂಡು ಏಳು ದಿನದೊಳಗೆ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಿದ್ದರು.

ಇದೀಗ ಈ ಹಣ ಎಂಡಿಸಿಸಿ ಬ್ಯಾಂಕ್‍ಗೆ ಸೇರಿದ್ದೆಂದು ದಾಖಲೆಯೂ ಇದೆ. ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಬ್ಯಾಂಕ್‍ನ ಸೀನಿಯರ್ ಅಸಿಸ್ಟೆಂಟ್ ಚೇತನ್‍ಬಾಬು ಅವರನ್ನು ಅಮಾನತುಪಡಿಸಲಾಗಿದೆ.

Facebook Comments