2ನೆ ದಿನವೂ ಮುಂದುವರೆದ ಬ್ಯಾಂಕ್ ಮುಷ್ಕರ, ವಹಿವಾಟು ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

Bank-Strike
ಬೆಂಗಳೂರು, ಮೇ 31- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರು ನಿನ್ನೆ ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಮುಷ್ಕರ ಇಂದೂ ಕೂಡ ಮುಂದುವರೆದಿದ್ದು, ಬ್ಯಾಂಕಿಂಗ್ ವಹಿವಾಟು ಸ್ಥಗಿತಗೊಂಡ ಕಾರಣ ಗ್ರಾಹಕರು ಪರದಾಡುವಂತಾಯಿತು. ರಾಜ್ಯದ ವಿವಿಧ ನಗರಗಳಲ್ಲಿ ಇಂದಿಗೂ ಕೂಡ ಬ್ಯಾಂಕ್ ನೌಕರರು ಮುಷ್ಕರ ಮುಂದುವರೆಸಿದ್ದರಿಂದ ಹಣಕಾಸು ವಹಿವಾಟಿಗೆ ತೀವ್ರ ಧಕ್ಕೆಯಾಯಿತು.

ಸ್ಟೇಟ್‍ಬ್ಯಾಂಕ್ ಆಫ್ ಇಂಡಿಯಾ, ಕೆನರಾಬ್ಯಾಂಕ್, ಆಂಧ್ರಾಬ್ಯಾಂಕ್, ಐಸಿಐಸಿ ಬ್ಯಾಂಕ್, ಆಕ್ಸಿಸ್, ಕೋಟೆಕ್ ಮಹಿಂದ್ರ ಸೇರಿದಂತೆ ಸಹಕಾರಿ ಬ್ಯಾಂಕ್‍ಗಳು ಕೂಡ ನಿನ್ನೆಯಿಂದ ಬಂದ್‍ಗೆ ಬೆಂಬಲ ನೀಡಿ ಇಂದೂ ಸಹ ಮುಷ್ಕರ ನಡೆಸಿದವು.ಸಾಮಾನ್ಯವಾಗಿ ವ್ಯಾಪಾರ ವಹಿವಾಟು ನಡೆಸುವವರು ಬ್ಯಾಂಕ್ ಮೇಲೆ ಹೆಚ್ಚು ಅವಲಂಬಿತವಾಗಿದ್ದರು. ತಮ್ಮ ವಹಿವಾಟು ನಿಂತಿದ್ದರಿಂದ ಕೆಲವರು ಗೊಣಗುತ್ತಲೇ ವಾಪಸಾದರು.

ಬ್ಯಾಂಕ್ ವಹಿವಾಟುಗಳು ಸ್ಥಗಿತಗೊಂಡಿದ್ದರಿಂದ ಬಹುತೇಕ ಜನರು ಎಟಿಎಂ ಬಳಿ ದೌಡಾಯಿಸಿದ್ದರು. ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್‍ನಲ್ಲಿ ಹಣ ಪಡೆಯಲು ಸಾಧ್ಯವಾಗದ ಕಾರಣ ದಿನನಿತ್ಯದ ವಹಿವಾಟುಗಳಿಗೆ ಹಣ ಪಡೆಯಲು ಗ್ರಾಹಕರು ಎಟಿಎಂನಲ್ಲಿ ಹಣ ಪಡೆಯಲು ಮುಗಿ ಬಿದ್ದರು.

ನವದೆಹಲಿ ವರದಿ:
ಎರಡನೇ ದಿನ ಮುಷ್ಕರದಿಂದಾಗಿ ವಾಣಿಜ್ಯ ರಾಜಧಾನಿ ನವದೆಹಲಿ, ಪ್ರಮುಖ ಮಹಾನಗರಗಳಾದ ಕೋಲ್ಕತ್ತಾ, ಚನ್ನೈ, ಹೈದರಾಬಾದ್, ಅಹಮದಾಬಾದ್, ಜೈಪುರ್, ಪಾಟ್ನ, ನಾಗ್‍ಪುರ್, ಜಮ್ಮು, ಗೋಹಾತಿ, ಜೆಮ್‍ಶೆಡ್‍ಪುರ್, ಆಗ್ರ, ತಿರುವನಂತರಪುರ ಮೊದಲಾದ ನಗರಗಳಲ್ಲೂ ಎರಡನೇ ದಿನದ ಬಂದ್ ಯಶಸ್ವಿಯಾಗಿದೆ. ದೇಶಾದ್ಯಂತ 21 ಸಾರ್ವಜನಿಕ ವಲಯದ 85 ಸಾವಿರ ಶಾಖೆಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ.

Facebook Comments

Sri Raghav

Admin