ಇಂದಿನಿಂದ ಬ್ಯಾಂಕ್ ವ್ಯವಹಾರದ ವೇಳೆ ಬದಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1- ಕೊರೋನಾ ಸಾಂಕ್ರಾಮಿಕ ರೋಗ ಹರುಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ಸ್‌ಗಳ ಸಮಿತಿಯ ಆದೇಶದನ್ವಯ ಇಂದಿನಿಂದ ಜೂನ್ 5 ರವರೆಗೆ ಎಲ್ಲಾ ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳ ವ್ಯವಹಾರದ ವೇಳೆಯನ್ನು ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಿಗದಿಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಮಧುಸೂದನ್.ಎಂ.ಸಿ. ಅವರು ತಿಳಿಸಿದ್ದಾರೆ.

ಬದಲಾಯಿಸಿದ ಈ ಬ್ಯಾಂಕ್ ವ್ಯವಹಾರದ ಸಮಯದಲ್ಲಿ ನಿಗದಿತ ಸೇವಾ ವ್ಯವಹಾರಗಳು ಮಾತ್ರ ನಡೆಯಲಿವೆ. ಬ್ಯಾಂಕ್ ಗ್ರಾಹಕರು ಈ ಬದಲಾದ ಸೇವಾ ಸಮಯವನ್ನು ಗಮನಿಸಿ ಬ್ಯಾಂಕ್ ಗಳೊಂದಿಗೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin