ಇಂದಿನಿಂದ ಬ್ಯಾಂಕ್‍ನಲ್ಲಿ ದಿನದ 4 ಗಂಟೆ ಮಾತ್ರ ಗ್ರಾಹಕರ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

ನೋಯ್ಡಾ,ಏ.22- ಇಂದಿನಿಂದ ಮೇ 15ರವರೆಗೆ ಉತ್ತರಪ್ರದೇಶದ ಎಲ್ಲಾ ಬ್ಯಾಂಕ್‍ಗಳು ದಿನದಲ್ಲಿ 4 ಗಂಟೆಗಳು ಮಾತ್ರ ಗ್ರಾಹಕರ ಸೇವೆಗೆ ಲಭ್ಯವಿರಲಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್‍ನ ವಕ್ತಾರ ಅನಿಲ್ ತಿವಾರಿ ತಿಳಿಸಿದ್ದಾರೆ.

ಗ್ರಾಹಕರು ಬ್ಯಾಂಕ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಬ್ಯಾಂಕ್ ನೌಕರರ ಹಿತದೃಷ್ಟಿಯಿಂದ ದಿನದ ಕರ್ತವ್ಯದಲ್ಲಿ 4 ಗಂಟೆಗಳು ಮಾತ್ರ ಗ್ರಾಹಕರ ಸೇವೆಯಲ್ಲಿ ತೊಡಗಲು ಸೂಚಿಸಲಾಗಿದೆ. ಶೇ.50ರಂತೆ ನೌಕರರು ರೊಟೇಷನ್ ಬೇಸಿಸ್‍ನಲ್ಲಿ ಕೆಲಸ ಮಾಡಲಿದ್ದಾರೆ.

ಈ ಹೊಸ ಮಾರ್ಗಸೂಚಿ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‍ಗಳಿಗೆ ಇಂದಿನಿಂದ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯಮಟ್ಟದ ಬ್ಯಾಂಕರ್ ಕಮಿಟಿ(ಎಸ್‍ಎಲ್‍ಬಿಸಿ)ಯಿಂದ ನಡೆದ ವಿಡಿಯೋ ಕಾನರೆನ್ಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇಂದಿನಿಂದ ಮೇ 15ರವರೆಗೂ ಬೆಳಗ್ಗೆ 10ರಿಂದ 12 ಗಂಟೆವರೆಗೂ ಮಾತ್ರ ಸೇವಾ ಅವಯಾಗಿರುತ್ತದೆ. ಬ್ಯಾಂಕ್ ಸಂಜೆ 4 ಗಂಟೆಯವರೆಗೂ ತೆರೆದಿದ್ದರೂ ಸಹ ಗ್ರಾಹಕರ ಸೇವೆಗೆ ನಾಲ್ಕು ಗಂಟೆಗಳು ಮಾತ್ರ ಲಭ್ಯವಿರಲಿದೆ. ಮೇ 15ರ ನಂತರ ಕೋವಿಡ್ ಪ್ರಕರಣಗಳ ಸಂಖ್ಯೆ ನೋಡಿಕೊಂಡು ಇದನ್ನು ಮುಂದುವರೆಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಸಭೆ ತಿಳಿಸಿದೆ.

Facebook Comments