ಮಹಾರಾಷ್ಟ್ರದಲ್ಲಿ 20 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ವಶ, ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಫೆ.27 (ಪಿಟಿಐ)- ಜಿಲ್ಲೆಯ ಮಿರಾ ಭಾಯಂದರ್‍ನಲ್ಲಿ 20 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ಹಾಗೂ ಇತರ ತಂಬಾಕು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಮುಂಬೈಗೆ ಗುಟ್ಕಾ ಹಾಗೂ ಮತ್ತಿತರ ತಂಬಾಕಿನಿಂದ ತಯಾರಿಸಲ್ಪಟ್ಟ ವಸ್ತುಗಳು ಬರುತ್ತಿವೆ ಎಂಬ ಖಚಿತ ಸುಳಿವಿನ ಮೇರೆಗೆ ಕೂಡಲೇ ಜಾಗೃತರಾದ ಕಾಶಿಮೀರಾ ಪೊಲೀಸರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಕಾಬಂಧಿ ಏರ್ಪಡಿಸಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.

ಮುಂಬೈ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಬೈ ಬರುತ್ತಿದ್ದ ಟ್ರಕ್ ಅನ್ನು ತಡೆದು ಪರಿಶೀಲಿಸಿದಾಗ ಗುಟ್ಕಾ ಸೇರಿದಂತೆ ಇತರ ನಿಷೇಧಿತ ವಸ್ತುಗಳು ದೊರೆತಿವೆ ಎಂದು ಎಂಬಿವಿವಿ ಪೊಲೀಸ್ ವಕ್ತಾರ ತುಕರಾಂ ತಟ್ಕರ್ ತಿಳಿಸಿದ್ದಾರೆ.

ಸುಮಾರು 20.35 ಲಕ್ಷದ ಮಾಲನ್ನು ವಶಪಡಿಸಿಕೊಂಡು, ಟ್ರಕ್ ಚಾಲಕ ಮೊಹಮ್ಮದ್ ಅಲ್ಮಿನ್ ಜಬ್ಬಾರ್ ಮತ್ತು ಕ್ಲೀನರ್ ಮೊಹಮ್ಮದ್ ಜುನೈದ್ ಲಿಖಾಯತ್ ಖಾನ್‍ನನ್ನು ಬಂಧಿಸಿ ಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

2012ರಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಮತ್ತಿತರ ಸುವಾಸಭರಿತ ಮಾದಕ ವಸ್ತುಗಳ ಸೇವನೆಯನ್ನು ನಿಷೇಧಿಸಲಾಗಿದ್ದಲ್ಲದೆ, ಗುಟ್ಕಾ ಮಾರಾಟವನ್ನು ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ.

Facebook Comments