ಮಹಾರಾಷ್ಟ್ರದಲ್ಲಿ 11.43 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಪಾಲ್ಗಾರ್, ಫೆ.25 (ಪಿಟಿಐ)- ಮಹಾರಾಷ್ಟ್ರದ ವಿರಾರ್ ಪ್ರದೇಶದಲ್ಲಿ ಟ್ರಕ್ಕೊಂದರಲ್ಲಿ ಸಾಗಿಸುತ್ತಿದ್ದ 11.43 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಸುಳಿವು ದೊರೆತ ಕೂಡಲೇ ಜಾಗೃತರಾದ ಪೊಲೀಸರು ಗುಜರಾತ್ ರಾಜ್ಯದಿಂದ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಟ್ರಕ್ ತಡೆದು ಮಾಲು ವಶಪಡಿಸಿಕೊಂಡಿದ್ದಾರೆ.

ಲಾರಿಯಲ್ಲಿ ವಸ್ತ್ರಗಳನ್ನು ತುಂಬಿದ ಬಾಕ್ಸ್‍ಗಳ ಕೆಳಗೆ 22 ಗೋಣಿಚೀಲಗಳಲ್ಲಿ ಬಚ್ಚಿಡಲಾಗಿದ್ದು ಗುಟ್ಕಾವನ್ನು ವಶಪಡಿಸಿಕೊಂಡು ಚಾಲನನ್ನು ಬಂಧಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

2012ರಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಗುಟ್ಕಾ ಬ್ಯಾನ್ ಮತ್ತಿತರ ಸುವಾಸಭರಿತ ಮಾದಕ ವಸ್ತುಗಳ ಸೇವನೆಯನ್ನು ನಿಷೇಧಿಸಲಾಗಿದೆ. ಅಲ್ಲದೆ, ಗುಟ್ಕಾ ಮಾರಾಟವನ್ನು 2018ರಿಂದ ರದ್ದು ಪಡಿಸಲಾಗಿದೆ. ಇದನ್ನು ಮಾರಾಟ ಮಾಡಿದವರಿಗೆ ಆರು ತಿಂಗಳಿಂದ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಅವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.

Facebook Comments