ಸದ್ಯಕ್ಕೆ ಓಪನ್ ಆಗಲ್ಲ ಬಾರ್ ಅಂಡ್ ರೆಸ್ಟೋರೆಂಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7- ಕೊರೊನಾ ವೈರಸ್ ಲಾಕ್ ಡೌನ್ 3.0 ನಡುವೆಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲ ಆರ್ಥಿಕ ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆಯಾದರೂ ಸದ್ಯಕ್ಕೆ ಬಾರ್ ಮತ್ತು ರೆಸ್ಟೋರೆಂಟ್ ತೆರೆಯದಿರಲು ಸರ್ಕಾರ ನಿರ್ಧರಿಸಿದೆ.

ಲಾಕ್‍ಡೌನ್ ನಡುವೆ ಷರತ್ತುಗಳೊಂದಿಗೆ ಮೇ 4ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದೆಯಾದರೂ ಬಾರ್ ಮತ್ತು ರೆಸ್ಟೋರೆಂಟ್ ತೆರೆಯದಿರಲು ಸರ್ಕಾರ ನಿರ್ಧರಿಸಿದೆ.

ಕೇವಲ ಎಂಎಸ್‍ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬುತ್ತಿದೆ. ಆದರೆ ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಸದ್ಯಕ್ಕೆ ಬಾರ್ ಅಂಡ್ ರೆಸ್ಟೋರೆಂಟ್ ಸದ್ಯ ಓಪನ್ ಮಾಡುವ ಚಿಂತನೆ ಇಲ್ಲ, ಬಜೆಟ್ ನಲ್ಲಿ ಹೇಳಿದಂತೆ ಶೇ.6ರಷ್ಟು ಹಾಗೂ ಈಗ ಶೇ.11ರಷ್ಟು ಸೇರಿಸಿ ಶೇ.17ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ, ಈ ಬಗ್ಗೆ ಅಧಿಕೃತ ಅದೇಶದಲ್ಲಿ ವಿವರಣೆ ಸಿಗಲಿದೆ. ಇನ್ನೂ ಹದಿನೈದು ದಿನಕ್ಕೆ ಬೇಕಾದಷ್ಟು ಮದ್ಯ ನಮ್ಮ ಬಳಿ ಇದೆ.

ನಿನ್ನೆಗಿಂತಲೂ ಹೆಚ್ಚು ಆದಾಯ ಇವತ್ತು ಸರ್ಕಾರಕ್ಕೆ ಬಂದಿದೆ. ಇವತ್ತು ಹೊಸ ತೆರಿಗೆ ಸೇರಿದೆ. ಹೀಗಾಗಿ ಸರ್ಕಾರಕ್ಕೆ ಹೆಚ್ಚು ರಾಜಧನ ಬರುತ್ತದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಮದ್ಯಕ್ಕೆ ಹೆಚ್ಚುವರಿ ಬೆಲೆ ಹಾಕುವುದು ಉತ್ತಮ. ಶೇ.50ರಷ್ಟು ಅಲ್ಲದಿದ್ದರೂ ಹೆಚ್ಚು ಮಾಡುವುದು ಒಳಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಮದ್ಯಪ್ರಿಯರು ಎಷ್ಟೇ ದುಬಾರಿಯಾದರೂ ಖರೀದಿ ಮಾಡುತ್ತಾರೆ. ದೆಹಲಿ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮಾದರಿ ಅಳವಡಿಸುವ ಬಗ್ಗೆ ಚಿಂತನೆ ಇದ್ದು, ಈ ಸಂಬಂಧ ಚರ್ಚೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Facebook Comments

Sri Raghav

Admin