ಸೆಕ್ಸ್‌ಗೆ ಒಪ್ಪದ ಬಾರ್ ಡ್ಯಾನ್ಸರ್‌ಗಳ ನಗ್ನಗೊಳಿಸಿ ಹಿಂಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಜೂ.17- ಬಾರ್‍ವೊಂದರಲ್ಲಿ ಕಾಸ್ಟಮರ್‍ಗಳ ಎದುರೇ ಡ್ಯಾನ್ಸರ್‍ಯೊಬ್ಬಳ ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ನಾಲ್ವರು ಮಹಿಳೆಯರನ್ನು ಪಂಜಾಗುಟ್ಟಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೇಗುಂಪೇಟ್‍ನಲ್ಲಿರುವ ಬಾರ್‍ನಲ್ಲಿ ಕೆಲಸ ಮಾಡುತ್ತಿದ್ದ ನೃತ್ಯಗಾತಿಯೊಬ್ಬಳಿಗೆ ಕೆಲವು ತಿಂಗಳಿನಿಂದ ಮಾನಸಿಕ ಕಿರುಕುಳ ನೀಡುತ್ತಿದ್ದು ಬಾರ್‍ಗೆ ಬರುವ ಗ್ರಾಹಕರೊಂದಿಗೆ ಅಕ್ರಮ ಸಂಬಂಧವಿರಿಸಿಕೊಳ್ಳುವಂತೆ ನಾಲ್ವರು ಮಹಿಳೆಯರು ಸೇರಿದಂತೆ ಬಾರ್‍ನ ಮಾಲೀಕ ಕಿರುಕುಳ ನೀಡುತ್ತಿದ್ದರು ಎಂದು ನೃತ್ಯಗಾತಿ ದೂರಿನಲ್ಲಿ ತಿಳಿಸಿದ್ದಾರೆ.

ನಿನ್ನೆ ಕೂಡ ಬಾರ್‍ಗೆ ಬರುವ ಗ್ರಾಹಕರ ಎದುರು ಬೆತ್ತಲೆಯಾಗಿ ನೃತ್ಯ ಮಾಡುವಂತೆ ಕಿರುಕುಳ ನೀಡಿದ್ದಾರೆ, ಇದಕ್ಕೊಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ ನಾಲ್ವರು ಮಹಿಳೆಯರು ಬಲವಂತವಾಗಿ ಆಕೆಯ ಬಟ್ಟೆಯನ್ನು ಬಿಚ್ಚಿದ್ದಾರೆ.

ಮಾನಸಿಕ ಕಿರುಕುಳ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠ ತೆಲಂಗಾಣ ಮಹೇಂದ್ರರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ