ಬೃಹತ್ ದೇಶಗಳಿಗೆ ಉದ್ಯಮವಾಗುತ್ತಿರುವ ಯುದ್ಧ : ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.14- ಬೃಹತ್ ದೇಶಗಳಿಗೆ ಯುದ್ಧ ಎನ್ನುವುದು ಒಂದು ಉದ್ಯಮವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ವಿಷಾದಿಸಿದರು. ಪ್ರೆಸ್‍ಕ್ಲಬ್‍ನಲ್ಲಿಂದು ಚಿಂತನ ಚಿಲುಮೆ ಸಂಘಟನೆ, ಸಮಕಾಲೀನ ವೇದಿಕೆ, ಮಾಲೆ ಪ್ರಕಾಶನ, ಜನಚಿಂತನೆ ಕೇಂದ್ರ, ದಲಿತ ಹಕ್ಕುಗಳ ಸಮಿತಿ ಹಾಗೂ ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘಟನೆ ಸಹಯೋಗದೊಂದಿಗೆ ನಡೆದ 1962ರ ಭಾರತ-ಚೈನಾ ಯುದ್ಧಕ್ಕೆ ಸಂಬಂಧಿಸಿದ ಯಡೂರ ಮಹಾಬಲ ಬರೆದ ಪುಸ್ತಕಗಳ ಬಿಡುಗಡೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಈ ಮೊದಲು ರಾಜಪ್ರಭುತ್ವದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಯುದ್ಧಗಳು ನಡೆಯುತ್ತಿದ್ದವು. ಆದರೆ, ಈಗ ಮತದಾನಕ್ಕಾಗಿ ಹಾಗೂ ಪಕ್ಷದ ಅಸ್ತಿತ್ವಕ್ಕಾಗಿ ಯುದ್ಧಗಳನ್ನು ಮಾಡಿಯೇ ತೀರುತ್ತೇವೆ ಎಂಬ ಕಾಲ ಬಂದಿದೆ. ಸೈನಿಕನ ಬಲಿದಾನಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು. ಕನ್ನಡದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಕೃತಿಗಳು ತೀರಾ ಕಡಿಮೆ. ಈ ನಿಟ್ಟಿನಲ್ಲಿ ಕೃತಿಕಾರ ಯಡೂರ ಮಹಾಬಲ ಕನ್ನಡದಲ್ಲಿ ಯುದ್ಧದ ಬಗ್ಗೆ ಕೃತಿ ಬರೆದಿರುವುದು ವಿಶೇಷ ಸಂಶೋಧಕನಿಗೆ ಅಧ್ಯಯನಶೀಲತೆ ಅಗತ್ಯ. ಆದರೆ ಸಂಶೋಧನೆ ಪಿಎಚ್‍ಡಿಗೆ ಸೀಮಿತವಾಗಬಾರದು ಎಂದು ತಿಳಿಸಿದರು.

ಸಂಶೋಧಕ ಭೂತಕಾಲವನ್ನು ಪ್ರಧಾನವಾಗಿಟ್ಟು ಕೊಂಡು ವರ್ತಮಾನಕ್ಕೆ ಅನುಗುಣವಾಗುವಂತೆ ಕೃತಿಯನ್ನು ಹೊರ ತಂದ ನಿಜವಾದ ದರ್ಶನ ಮಾಡಬೇಕು. ಕೆಲ ಲೇಖಕರು ಭೂತಕಾಲವನ್ನು ಪ್ರಧಾನವಾಗಿಟ್ಟುಕೊಳ್ಳದೇ ಕೃತಿ ರಚಿಸಿದರೆ ಅದಕ್ಕೆ ಹೆಚ್ಚಿನ ತೂಕ ಬರುವುದಿಲ್ಲ ಎಂದರು. ಸಂಸೃತಿಯ ಅಪ ವ್ಯಾಕ್ಯ ಹೆಚ್ಚಾಗುತ್ತಿದೆ. ಎಲ್ಲದಕ್ಕೂ ನೆಹರು ಅವರನ್ನು ಗುರಿಯಾಗಿಸಿ ಟೀಕಿಸುತ್ತಿದ್ದಾರೆ. ಗಾಂಧಿ ಮತ್ತು ಗೂಡ್ಸೆ ನಡುವೆ ಆಯ್ಕೆ ಮಾಡಿಕೊಳ್ಳಿಎಂದರೆ ಗೂಡ್ಸೆ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ನಾವಿದ್ದೇವೆ ಎಂದರು.

ರೈತ ಮುಖಂಡ ಜೆ.ಎಂ.ವೀರಸಂಗಯ್ಯ ಮಾತನಾಡಿ, ರಾಜರು ನಡೆಸಿದ ಯುದ್ಧಗಳು ಸಾಮ್ರಾಜ್ಯ ವಿಸ್ತರಣೆ ಮಾಡಿದರೆ ಪ್ರಜಾಪ್ರಭುತ್ವ ದಲ್ಲಿ ಗಡಿ ವಿವಾದ, ವ್ಯಾಪಾರಕ್ಕಾಗಿ ನಡೆಯುತ್ತಿವೆ. ಈ ಬಗ್ಗೆ ಭಾರತ ಮತ್ತು ಚೀನಾ ನಡುವಿನ ಯುದ್ಧವನ್ನು ಯಡೂರ ಮಹಾಬಲ ಅವರು ಸವಿಸ್ತಾರವಾಗಿ ಉಲ್ಲೇಖಿಸಿದ್ದಾರೆ. ಯುದ್ಧ ಬೇಡ ಎಂಬುವವರನ್ನು ದೇಶದ್ರೋಹಿಗಳು ಎಂಬ ಪಟ್ಟಿಗೆ ಸೇರಿಸುವ ಕಾಲ ಇದಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯಡೂರು ಮಹಾಬಲ ಬರೆದಿರುವ ಯುದ್ಧ ಪೂರ್ವ ಕಾಂಡ(1962ರ ಭಾರತ- ಚೀನಾ ಯುದ್ಧದ ಹಿಂದಿನ ಬೆಳವಣಿಗೆಗಳು), ಯುದ್ಧ ಕಾಂಡ (1962ರ ಭಾರತ- ಚೀನಾ ಯುದ್ಧದ ವಿವರಗಳು) ಪುಸ್ತಕ ಬಿಡುಗಡೆಗೊಳಿಸಲಾಯಿತು.

Facebook Comments