ಕೇಂದ್ರ ಸಚಿವ ಸದಾನಂದಗೌಡ ವಿರುದ್ಧ ಶಾಸಕ ಯತ್ನಾಳ್ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಅ.3- ಎಲ್ಲೋ ಕುಳಿತು ನೆರೆ ಪರಿಹಾರದ ಬಗ್ಗೆ ಮಾತನಾಡುವ ಬದಲು ಪ್ರಧಾನಿ ಮೋದಿಯವರ ಬಳಿ ಹೋಗಿ ಪರಿಹಾರದ ಹಣ ತೆಗೆದುಕೊಂಡು ಬನ್ನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರವಾದಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಕುರಿತು ಕಾಳಜಿ ತೋರಿ ಮಾತನಾಡಿದ್ದಾರೆ. ಅವರ ಬಗ್ಗೆ ಸದಾನಂದ ಗೌಡರು ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.

ಬೆಂಗಳೂರಲ್ಲೋ, ಹುಬ್ಬಳ್ಳಿಯಲ್ಲೋ ಕುಳಿತು ಮನಸಿಗೆ ಬಂದ ಹೇಳಿಕೆ ಕೊಡುವುದರಲ್ಲಿ ಅರ್ಥವಿಲ್ಲ, ಪ್ರಧಾನಿ ಬಳಿಗೆ ಹೋಗಿ ಪರಿಹಾರ ತನ್ನಿ ಅವರನ್ನು ಒತ್ತಾಯಿಸಿ ಜಗಳ ಮಾಡಿಯಾದರೂ ಸರಿ ಪರಿಹಾರ ತರಬೇಕು. ಅದು ಬಿಟ್ಟು ಸೂಲಿಬೆಲೆಯವರ ಬಗ್ಗೆ ಹೇಳಿಕೆ ನೀಡಿದರೆ ಅರಿಗೇನು ಹಾನಿಯಾಗುವುದಿಲ್ಲ ನಮ್ಮ ಪಕ್ಷಕ್ಕೆ ಹಾನಿಯಾಗುತ್ತದೆ. ಏಕೆಂದರೆ ಅವರೇನು ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಲ್ಲ ಎಂದು ಗರಂ ಆಗಿ ನುಡಿದರು.

ನೀವು ಕೇಂದ್ರಮಂತ್ರಿಗಳು, ನೀವೇ ಹೋಗಿ 10ಸಾವಿರ ಕೋಟಿ ಪರಿಹಾರಧನ ತೆಗೆದುಕೊಂಡು ಬನ್ನಿ. ಜನ ನಮ್ಮನ್ನೆಲ್ಲ ಕೆಲಸ ಮಾಡಲೆಂದೇ ಆಶೀರ್ವಾದ ಮಾಡಿ ಕಳಿಸಿದ್ದಾರೆ. ಉತ್ತರ ಕರ್ನಾಟಕ ಜನರ ಕಣ್ಣೀರೊರೆಸುವ ಕೆಲಸ ಮಾಡೋಣ ಎಂದು ಯತ್ನಾಳ್ ನುಡಿದರು.

Facebook Comments