ರಾಜ್ಯದೆಲ್ಲೆಡೆ ಮನೆಗಳಲ್ಲೆ ಸರಳ ಬಸವಜಯಂತಿ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಮೇ.14 ಸಮಾನತೆಯ ಹರಿಕಾರ.ಮಹಾಮಾನವತಾವಾದಿ.ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಅಕ್ಷಯ ತೃತೀಯ ವನ್ನು ನಾಡಿನೆಲ್ಲಡೆ ಮನೆ ಮನೆಗಳಲ್ಲಿ ಇಂದು ಸರಳವಾಗಿ ಆಚರಿಸಲಾಯಿತು. ಮಹಾಮಾರಿ ಕರೊನಾ ಈ ಭಾರಿ ಹಬ್ಬದ ಸಡಗರವನ್ನು ಖಸಿದು ಕೊಂಡಿದ್ದು ಎಲ್ಲರೂ ಮನೆಗಳಲ್ಲೆ ಅರ್ಥ ಪೂರ್ಣ ವಾಗಿ ಆಚರಿಸುವಂತಹ ಅನಿವಾರ್ಯತೆ ಎದುರಾಗಿದೆ.

ಲಾಕ್ಡೌನ್ ನಿಂದ ದೆವಾಲಯಗಳು ಬಂದ್ ಆಗಿದ್ದು ಭಕ್ತರ ಪ್ರವೇಶಕ್ಕೆ ಅವಕಾಶವಿಲ್ಲ.ಆದರೆ ಇಂದು ಮುಂಜಾನೆ ದೆವಾಲಯದ ಅರ್ಚಕರು ಮಾತ್ರ ದೆವರಿಗೆ ಪೂಜೆ ಸಲ್ಲಿಸಿದರು. ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಾರಿದ ಜಗಜ್ಯೋತಿ ಬಸವೆಶ್ವರರ ಜಯಂತೋತ್ಸವವನ್ನು ಪ್ರತಿ ವರ್ಷ ನಾಡಿನೆಲ್ಲೆಡೆ ವಿಶೆಷ ವಾಗಿ ಆಚರಣೆ ಮಾಡಲಾಗುತ್ತಿತ್ತು ಬಸವೇಶ್ವರ.ಶಿವನ ದೆಗುಲಗಳಲ್ಲಿ ವಿಶೆಷ ಪೂಜೆ.ಮೆರವಣಿಗೆ.ನಾಟಕ ಕಾರ್ಯ ಕ್ರಮಗಳನ್ನು ರಾಜ್ಯದ ವಿವಿದೆಡೆ ಹಮ್ಮಿ ಕೊಂಡು ಅರ್ಥ ಪೂರ್ಣ ಆಚರಣೆ ನಡೆಸಲಾಗುತ್ತಿತ್ತುಆದರೆ ಕರೋನಾ ಎಲ್ಲಾ ಸಡಗರಕ್ಕೂ ಬ್ರೆಕ್ ಹಾಕಿದೆ.ನಗರದ ಪ್ರಮುಖ ಕಡೆ ಬಸವೆಶ್ವರರ ಪುತ್ಥಳಿಗಳಿದ್ದು ಅಲ್ಲಿಯೂ ಯಾವುದೆ ಆಚರಣೆ ಇಲ್ಲದಂತಾಗಿದೆ.

ಅನ್ನದಾತರಿಗೆ ಇಂದು ವಿಶೇಷ ದಿನ ವರ್ಷ ವಿಡಿ ದುಡಿದ ರಾಸುಗಳಿಗೆ ಪೂಜೆ ಮಾಡಲಾಗುತ್ತದೆ ಆದರೆ ಈ ಭಾರಿ ಲಾಕ್ಡೌನ್ ನಿಂದ ಬೆಳೆದ ಬೆಳೆ ಮಾರಲಾಗದೆ ಬೆಳೆಇಲ್ಲದೆ ಜಮಿನಿನಲ್ಲೆ ಬೆಳೆ ನಾಶವಾಗುತ್ತಿದ್ದು ನಿಜಕ್ಕೂ ಸಹ ಇಂದು ರೈತರಲ್ಲಿ ಬಸವ ಜಯಂತಿ ಆಚರಣೆಯನ್ನು ಕಿತ್ತುಕೊಂಡು ಸಂಕಷ್ಟಕ್ಕೆ ಸಿಲಿಕಿಸಿದೆ.

ಮಾನವ ಜನ್ಮದೊಡ್ಡದಲ್ಲ ಮಾನವಿಯತೆ ದೊಡ್ಡದು .ಧರ್ಮ ದೊಡ್ಡದಲ್ಲ ದಯೆ ದೊಡ್ಡದು.ವಿಶ್ವಕ್ಕೆ ದಯೆ.ಕರುಣೆ.ಮಾನವೀಯತೆ.ಶಾಂತಿ ಸಾರಿದ ಬಸವಣ್ಣನವರ ಸಂದೇಶಗಳು ಕರೋನಾ ದಂತಹ ಪ್ರಸ್ತುತ ಸನ್ನಿವೆಶದಲ್ಲಿ ಅಕ್ಷರ ಸಹ ಸತ್ಯವಾಗಿದೆ.
ಮಹಾ ಮಾರಿಯಿಂದ ಇಡಿ ರಾಜ್ಯವೆ ತತ್ತರಿಸಿ ಹೊಗಿದೆ ಸೊಂಕಿಗೆ ಎಲ್ಲರೂ ಒಂದೆ ಎಂಬತ್ತಾಗಿದೆ.ಬಡವ.ಶ್ರಿಮಂತ.ಒಳ್ಳೆಯವರು.ಕೆಟ್ಟವರು.ಎನ್ನದೆ ಎಲ್ಲರನ್ನೂ ಒಂದೆ ದೃಷ್ಟಿಯಲ್ಲಿ ಕರೋನಾ ಆವರಿಸಿ ಪ್ರಾಣಹಿಂಡುತ್ತಿದೆ.ಈ ಸನ್ನಿವೆಶ ಮಾನವ ಜನ್ಮ ದೊಡ್ಡದಲ್ಲ‌ಎಂಬುದನ್ನು ಸಾಭಿತು ಪಡಿಸಿದೆ.ಇಂತಹ ಕಠಿಣ ಸಂದರ್ಭದಲ್ಲಿ ದಲ್ಲಿ ಬಸವಣ್ಣನವರ ಮಾನವಿಯತೆಯ ಸಂದೇಶವನ್ನು ಪ್ರತಿಯೊಬ್ಬರು ಪಾಲಿಸಬೆಕಾಗಿದೆ. ಎಲ್ಲರೂ ಸಹಾಯ ಮನೊಭಾವ ಬೆಳೆಸಿಕೊಳ್ಳಬೆಕಿದೆ ಎಲ್ಲರೂ ಒಗ್ಗಟ್ಟಾಗಿ ಸೊಂಕು ನಿರ್ಮೂಲನೆಗೆ ಕೈ ಜೊಡಿಸಬೆಕಿದೆ.

ಸರಳ ಅಕ್ಷಯ ತೃತೀಯ
ವೈಶಾಕ ಮಾಸದ ಶುಕ್ಲ ಪಕ್ಷದ ತೃತೀಯ ಯ ದೀನವೆ ಅಕ್ಷಯ ತೃತೀಯ. ಇಂದು ಚಿನ್ನ.ಬೆಳ್ಳಿ.ಆಸ್ತಿ ಖರಿದಿ.ನೂತನ ವ್ಯವಹಾರ.ಹೊಸ ಬೆಳೆಬೆಳೆಯಲು ಇಂದು ಉತ್ತಮ ವಾದ ದಿನ ಇಂದು ಯಾವುದೆ ಕೆಲಸಕ್ಕೆ ಕೈ ಹಾಕಿದರೂ ಅಕ್ಷಯವಾಗುತ್ತದೆ ಎಂಬುದು ನಂಭಿಕೆ.ಹಾಗಾಗಿ ಇಂದೆ ಬಹುತೆಕ ಜನರು ಒಳ್ಳೆಯ ಕೆಲಸ ಮಾಡುತ್ತಾರೆ ಆದರೆ ಈ ಭಾರಿ ಯಾವ ಕೆಲಸ ಕಾರ್ಯ ಮಾಡದಂತೆ ಕರೋನಾ ಅಡ್ಡಗಾಲು ಹಾಕಿದೆ.

ಮನೆಯಲ್ಲೆ ಪೋಜೆ ಮಾಡುವಂತಾಗಿದೆ.ಚಿನ್ನ ಬೆಳ್ಳಿ ಖರಿದಿಸಿದ್ರೆ ಅಕ್ಷಯವಾಗುತ್ತೆ ಎನ್ನುವ ನಂಭಿಕೆಗೆ ಲಾಕ್ಡೌನ್ ತಣ್ಣಿರೆರಚಿದೆ.ಯಾವುದೆ ಆಭರಣದ ಅಂಗಡಿಗಳು ತೆರೆದಿಲ್ಲ ಹಾಗಾಗಿ ಹೊಸ ಆಭರಣ ಮನೆಗೆ ತಂದಿಲ್ಲ ಇರುವ ಆಭರಣವಿಟ್ಟು ಪೂಜೆ ಮಾಡುವಂತಾಗಿದೆ ಅಷ್ಟೇ ಇನ್ನೂ ಆನ್ ಲೈನ್ ನಲ್ಲಿ ಆ ಭರಣ ಖರಿದಿಸಿದವರು ಮಾತ್ರ ಪೂಜೆ ಸಲ್ಲಿಸಿ ಸರಳವಾಗಿ ಆಚರಣೆ ಮಾಡಿದ್ದಾರೆ.

ಇಂದು ದಾನ ಧರ್ಮ ಮಾಡಿದರೆ ಒಳ್ಳೆಯದಾಗುತ್ತದೆ ಎಂಬುದು ಮತ್ತೊಂದು ನಂಬಿಕೆ ಆದ್ರೆ ಎಲ್ಲಿ ಹೊಗಿ ಧಾನ ಮಾಡೊದು ಯಾರಿಗೆ ಕೊಡೊದು ಎಲ್ಲರೂ ಮನೆಯಲ್ಲೆ ಲಾಕ್ ಆಗಿದ್ದಾರೆ ಇದರಿಂದ ಅಕ್ಷಯ ತೃತೀಯ ವನ್ನು ಮನೆಯ ದೆವರ ಕೊಣೆಗಳಲ್ಲೆ ಸರಳವಾಗಿ ಆಚರಣೆ ಮಾಡಲಾಗಿದೆ.

ದೆಶಕ್ಕೆ ರಾಜ್ಯಕ್ಕೆ ಬಂದಿರುವ ಕರೋನಾ ಸೊಂಕು ಶಮನವಾಗಿ ಎಲ್ಲರೂ ಆರೋಗ್ಯ ಸುಖ ಶಾಂತಿ ನೆಮ್ಮದಿಯಂತೆ ಬಾಳುವಂತಾಗಲಿ.

Facebook Comments