“ಬಸವರಾಜ ಹೊರಟ್ಟಿಯವರ 40 ವರ್ಷಗಳ ಸುದೀರ್ಘ ಸೇವೆ ಅವಿಸ್ಮರಣೀಯ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.11- ಶಿಕ್ಷಣ ಕ್ಷೇತ್ರದ ಕೊರೊನಾ ವಿರುದ್ಧ ಹೋರಾಟ ಮಾಡುತ್ತ ಬಂದ ಮಾಜಿ ಸಚಿವ ಬಸವರಾಜ್ ಎಸ್.ಹೊರಟ್ಟಿ ಅವರು ಶಿಕ್ಷಕರಿಗೆ ಆಪತ್ಭಾಂಧವರಾಗಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಭಾರತ ಯಾತ್ರಾಕೇಂದ್ರ ಲೋಕನಾಯಕ ಜೆಪಿ ವಿಚಾರ ವೇದಿಕೆ, ಸ್ವಾತಂತ್ರ್ಯ ಸೇನಾನಿ, ಪ್ರಜಾಪ್ರಭುತ್ವದ ಸಂರಕ್ಷಕ, ಭಾರತದ ಸಾಕ್ಷಿಪ್ರಜ್ಞೆ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 118ನೆ ದಿನದ ಸವಿನೆನಪು ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಭಾರತದಲ್ಲೇ ದಾಖಲೆ ಸೃಷ್ಟಿಸಿ 40 ವರ್ಷಗಳನ್ನು ಪೂರೈಸಿರುವ ಹಿರಿಯ ರಾಜಕಾರಣಿ ಬಸವರಾಜ್ ಎಸ್.ಹೊರಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

40 ವರ್ಷಗಳ ಅವಯಲ್ಲಿ ಹೊರಟ್ಟಿ ಅವರು ಸುದೀರ್ಘ ಹೋರಾಟ ಮಾಡುತ್ತ ಬಂದಿದ್ದಾರೆ. ಅವರು ಮಾಡದ ಹೋರಾಟವಿಲ್ಲ, ಹೋರಾಟದಲ್ಲಿ ಜಯಶೀಲರಾಗಿದ್ದಾರೆ. ಶಿಕ್ಷಕರ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡಿದ್ದಾರೆ. ಸಚಿವರಾದ ಅವಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತಂದಿದ್ದಾರೆ ಎಂದು ಶ್ಲಾಘಿಸಿದರು.

42 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ದೇಶದಲ್ಲೇ ದಾಖಲೆ ನಿರ್ಮಿಸಿರುವುದು ಕನ್ನಡಿಗರು ಹೆಮ್ಮೆ ಪಡುವಂತಹ ಸಂಗತಿ. ಅವರು ವಿಧಾನ ಪರಿಷತ್ ಸದಸ್ಯರಾಗಿ 50 ವರ್ಷ ಮುಂದುವರಿಯಲಿ. ಎರಡು ಬಾರಿ ಸಚಿವರಾಗಿ, ಸಭಾಪತಿಯಾಗಿ, ವಿಧಾನ ಪರಿಷತ್ ಸದಸ್ಯರಾಗಿ ನಾಡಿನ ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ. ಲಕ್ಷಾಂತರ ಶಿಕ್ಷಕರಿಗೆ ಧೈರ್ಯ ತುಂಬಿದ್ದಾರೆ.

ಶಿಕ್ಷಕರಲ್ಲಿ ಹೊರಟ್ಟಿ ಅವರ ಹೆಸರು ಅಚ್ಚಳಿಯದೆ ಉಳಿಯುವಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಕೊರೊನಾ ಸಂಕಷ್ಟದಿಂದಾಗಿ ವೇತನವಿಲ್ಲದೆ ಅನ್ಯ ವೃತ್ತಿಯನ್ನು ಮಾಡುವುದನ್ನು ಗಮನಿಸಿದ ಹೊರಟ್ಟಿ ಅವರು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.

ಬಿಸಿಯೂಟವನ್ನು ಪ್ರೌಢಶಾಲೆಗೂ ವಿಸ್ತರಣೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಬಿಡುವಿಲ್ಲದ ಕಾರ್ಯನಿರ್ವಹಿಸುವ ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಗ್ರಂಥಪಾಲಕ ಹುದ್ದೆಗಳನ್ನು ಬೋಧಕ ಹುದ್ದೆ ರೀತಿ ಪರಿಗಣಿಸುವಂತೆ ಮಾಡಿದರು. ನಾಡಿನ ಜನರ ಸಮಸ್ಯೆಗಳ ಬಗ್ಗೆ ವಾಸ್ತವಿಕ ಅರಿವುಳ್ಳವರಿಗೆ ಅಕಾರ ಸಿಕ್ಕರೆ ಏನು ಮಾಡುತ್ತಾರೆ ಎಂಬುದಕ್ಕೆ ಹೊರಟ್ಟಿಯವರೇ ನಿದರ್ಶನ ಎಂದು ಅವರ ಸಾಧನೆಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಬಿ.ಎಲ್.ಶಂಕರ್, ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಮಾಜಿ ಶಾಸಕ ಮಧು ಬಂಗಾರಪ್ಪ, ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ, ರಂಗಕರ್ಮಿ ಕೆ.ವಿ.ನಾಗರಾಜ್ ಸ್ವಾಮಿ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

Facebook Comments

Sri Raghav

Admin