ರಾಷ್ಟ್ರಪತಿ ಆಡಳಿತ ಜಾರಿಗೆ ತರಲು ಬಿಜೆಪಿ ಹುನ್ನಾರ : ಬಸವರಾಜ ಹೊರಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮೇ 27- ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಸರಕಾರ ರಚಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ರಾಷ್ಟ್ರಪತಿ ಆಡಳಿತ ಹೇರಿ ಚುನಾವಣೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದ ಮಾಹಿತಿ ಪ್ರಕಾರ ಬಿಜೆಪಿಯವರು ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಿದ್ದಾರೆ. ಬಳಿಕ ಚುನಾವಣೆಗೆ ಹೋಗಲು ಬಿಜೆಪಿಯವರು ಸಿದ್ದತೆ ನಡೆಸಿದ್ದಾರೆ. ಲೋಕ ಸಭೆಯಲ್ಲಿ ಸಿಕ್ಕ ಗೇಲುವಿನಿಂದ, ವಿಧಾನ ಸಭೆ ಚುನಾವಣೆಗೆ ಹೋದರೆ 150 ಸ್ಥಾನಗಳನ್ನ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕ ಚಾರದಲ್ಲಿ ಬಿಜೆಪಿ ನಾಯಕರಿದ್ದಾರೆಂದು ಹೇಳಿದರು.

ಎಲ್ಲರು ಮಂತ್ರಿ ಆಗಬೇಕು ಎನ್ನುವವರೆ, ಇದು ಸಾಧ್ಯವಿಲ್ಲ. ಜೆಡಿಎಸ್ ಕಾಂಗ್ರೆಸ್ ನವರು ಒಗ್ಗಟ್ಟಿನಿಂದ ಸರಕಾರ ನಡೆಸಿದರೆ ಒಳ್ಳೆಯದು, ಇಲ್ಲದಿದ್ದರೆ ಕಷ್ಟ. ಮೈತ್ರಿಯಲ್ಲಿ ಹೆಚ್ಚು ಕಡಿಮೆ ಆಗಿದೆ, ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿದ್ದಾರೆ, ಮೈತ್ರಿಯಲ್ಲಿ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ನಾನು ಸಹ ಮಂತ್ರಿಯಾಗಿಲ್ಲ,

ನಾನು ಎಲ್ಲ ತ್ಯಾಗಕ್ಕೂ ಸಿದ್ದ, ಸರಕಾರ ಒಳ್ಳೆಯ ರೀತಿಯಲ್ಲಿ ನಡೆಯಬೇಕು, ಅದಕ್ಕಾಗಿ ಉಳಿದವರು ತ್ಯಾಗಕ್ಕೆ ಮುಂದಾಗಲಿ ಎಂದರು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸವಾಲಾಗಿ ಸ್ವೀಕರಿಸಿಕೊಂಡು ಗೊಂದಲಗಳನ್ನ ಬಗೆಹರಿಸಲಿ. ಕೆಲವು ಸಚಿವರು ರಾಜೀನಾಮೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.

ಹೊಸಬರಿಗೆ ಅವಕಾಶ ಮಾಡಿಕೊಡಲಿ. ಇಂತಹ ಕ್ಲಿಷ್ಟಕರವಾದ ಸ್ಥಿತಿಯಲ್ಲಿ ಸರಕಾರ ನಡೆಯಬೇಕಾದರೆ, ಕೆಲವರು ತ್ಯಾಗ ಮಾಡಲೇಬೇಕು, ಇಲ್ಲದಿದ್ದರೆ ಕಷ್ಟ. ಈಗಲು ಕಾಲ ಮಿಂಚಿಲ್ಲ ರಮೇಶ ಜಾರಕಿಹೋಳಿ ಯನ್ನ ಕರೆದು ಮಾತನಾಡಿ ಎಂದು ಸಲಹೆ ನೀಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ