‘ಡ್ರಗ್ಸ್’ ದುರುಪಯೋಗ, ಮೆಡಿಕೆಲ್ ಸ್ಟೋರ್ ಬಳಿ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.6- ಫಾರ್ಮಾ ಸ್ಯುಟಿಕಲ್‍ನಲ್ಲಿ ಕೆಲವು ಮಾದಕ ವಸ್ತುಗಳ ಬಳಕೆ ಮಾಡಲಾಗುತ್ತಿದೆ. ಅದರ ದುರಪಯೋಗ ಆಗೋದನ್ನು ತಡೆಯಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಪೂರೈಕೆದಾರರಿಗೆ ಬಿಸಿ ಮುಟ್ಟಿದರೆ, ಪಾರ್ಟಿಗಳ ಆಯೋಜನೆ ಬೆಂಗಳೂರಿನ ಹೊರಗೆ, ಜಿಲ್ಲಾಗಳಿಗೆ ಶಿಫ್ಟ್ ಆಗುತ್ತದೆ. ಹಾಗಾಗಿ ಜಿಲ್ಲಾಗಳ ಎಸ್ಪಿಗಳಿಗೆ ಕಠಿಣ ಕ್ರಮ ಕೈಗೊಳ್ಳಲು ಹೇಳಿದ್ದೇನೆ ಎಂದರು.

ರಿಪೀಟ್ ಅಫೆಂಡರ್ಸ್ ಮೇಲೆ ಗೂಂಡಾ ಕಾಯ್ದೆ ಪ್ರಯೋಗ ಮಾಡಲು ಸೂಚಿಸಿದ್ದೇನೆ. ಮಾದಕ ವಸ್ತುಗಳ ವಿರುದ್ಧ ತನಿಖೆ ಮುಂದುವರೆದಿದೆ. ನಿನ್ನೆ ಜಿಲ್ಲಾಗಳ ಎಸ್ಪಿಗಳು, ಐಜಿಗಳ ಜತೆ ಚರ್ಚೆ ಮಾಡಿ ಕೆಲವು ಸೂಚನೆಗಳನ್ನು ನೀಡಿದ್ದೇನೆ. ಗಡಿ ಜಿಲ್ಲಾಗಳಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನೊಂದು ಆಯಾಮ ಸಿಕ್ಕಿದೆ. ಕೆಲವು ದೇಶಗಳಲ್ಲಿ ಲೋವರ್ ಲೆವೆಲ್ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿವೆ. ಕೆಲವು ದೇಶಗಳಲ್ಲಿ ಮಾದಕ ವಸ್ತುಗಳ ಉತ್ಪಾದನೆ ಆಗುತ್ತದೆ. ಅಂಥ ದೇಶಗಳಿಂದ ಕಾರ್ಗೋಗಳ ಮೂಲಕ, ಪೋಸ್ಟ್, ಕೊರಿಯರ್ ಮೂಲಕ ಮಾದಕ ವಸ್ತುಗಳು ಪಾರ್ಸಲ್ ಬರುತ್ತಿವೆ. ಅಂಥ ಪ್ರಕರಣಗಳಲ್ಲಿ ನಿಗಾ ವಹಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.

ಆಫ್ರಿಕನ್ ಪ್ರಜೆ ಲೌಮ್ ಪೆರ್ಪ ಸಾಂಬಾ ಬಂಧನ ಆಗಿದೆ. ಆತ ಒಬ್ಬ ಫೆಡ್ಲರ್. ಹಲವು ಜನರಿಗೆ ಸಾಂಬಾ ಮಾದಕ ವಸ್ತುಗಳ ಪೂರೈಕೆ ಮಾಡಿದ್ದಾನೆ. ಈತನಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇವೆ. ಜತೆಗೆ ಎಫ್‍ಐಆರ್ ಹಾಕಿರುವ ಆರೋಪಿಗಳ ತೀವ್ರ ತನಿಖೆ ಆಗಲಿದೆ.

ಯಾರೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಸಿನಿಮಾ, ರಾಜಕೀಯದಲ್ಲಿರೋರು ಸಾಕ್ಷಿ ಸಮೇತ ಸಿಕ್ಕಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Facebook Comments