ಶಾಲೆಯ ಬೀಗ ಒಡೆದು 16 ಬ್ಯಾಟರಿ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಡಿ.5- ಶಾಲೆಯ ಬೀಗ ಒಡೆದು ತರಗತಿಯಲ್ಲಿಟ್ಟಿದ್ದ 2 ಲಕ್ಷ ಮೌಲ್ಯದ 16 ಬ್ಯಾಟರಿಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಹಲಗೂರು ಸಮೀಪ ನಡೆದಿದೆ.
ತಾಲ್ಲೂಕಿನ ಹಲಗೂರು ಹೋಬಳಿಯ ಮಾರಗೌಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕಂಪ್ಯೂಟರ್ ರೂಮಿನ ಬೀಗ ಒಡೆದು ಬ್ಯಾಟರಿಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ ಎಂದು ಶಾಲೆ ಮುಖ್ಯಶಿಕ್ಷಕ ಎ.ಎಸ್.ದೇವರಾಜು ತಿಳಿಸಿದ್ದಾರೆ.

ಎಂದಿನಂತೆ ನಮ್ಮ ಸಿಬ್ಬಂದಿ ಬೆಳಗ್ಗೆ ಬಾಗಿಲು ಒಡೆದು ಯಾರೋ ಒಳಗೆ ಪ್ರವೇಶಿಸಿದ್ದಾರೆ. ಶಾಲೆಯ ಕಂಪ್ಯೂಟರ್ ಕೊಠಡಿಯ ಕಬ್ಬಿಣದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಕೊಯ್ದು ತೆಗೆಯಲಾಗಿದೆ. ಮರದ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ಹಾಕಿದ್ದಾರೆ. ನಂತರ ಕೊಠಡಿಯಲ್ಲಿಟ್ಟಿದ್ದ 2 ಲಕ್ಷ ಮೌಲ್ಯದ 16 ಬ್ಯಾಟರಿಗಳನ್ನು ಕಳವು ಮಾಡಿ ಯಾವುದೋ ವಾಹನದಲ್ಲಿ ಕೊಂಡೊಯ್ಯಲಾಗಿದೆ ಎಂದು ತಿಳಿಸಿದರು.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಮುಖ್ಯ ಶಿಕ್ಷಕ ನೀಡಿದ ದೂರಿನಂತೆ ಪ್ರಕರಣ ದಾಖಲು ಮಾಡಿಕೊಂಡು ಸ್ಥಳಕ್ಕೆ ಪಿಎಸ್‍ಐ ಮತ್ತು ಸಿಬ್ಬಂದಿ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments