ಸರ್ಕಾರ, ಕಮಿಷನರ್ ಆದೇಶಕ್ಕೆ ಡೋಂಟ್ ಕೇರ್, ಇಲ್ಲಿ ಅದಿಕಾರಿಗಳಿದ್ದೆ ದರ್ಬಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ಕಮಿಷನರ್ ಆದೇಶಕ್ಕೆ ಕಿಮ್ಮತ್ತಿಲ್ಲ. ಸರ್ಕಾರದ ಆದೇಶವನ್ನು ಕೇರ್ ಮಾಡುವವರಿಲ್ಲ. ಇದು ಬಿಬಿಎಂಪಿಯ ಪರಿಸ್ಥಿತಿ. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಬಿಎಂಪಿ ಆಯುಕ್ತರು ಎಲ್ಲಾ ಸಿಬ್ಬಂದಿಗಳಿಗೆ ಸುತ್ತೋಲೆ ಹೊರಡಿಸಿದ್ದರು. ಆದರೆ, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಡೋಂಟ್‍ಕೇರ್ ಮಾಡಿ ಕಚೇರಿಗೆ ಬೀಗ ಜಡಿದು ಮನೆಯಲ್ಲೇ ಆರಾಮಾಗಿ ಉಳಿದಿದ್ದಾರೆ.

ಪಾಲಿಕೆಯ ಕೇಂದ್ರ ಕಚೇರಿ ಆವರಣ ಬಿಕೋ ಎನ್ನುತ್ತಿದೆ. ಡಿ ದರ್ಜೆ ನೌಕರರು ಬಂದು ಬಾಗಿಲು ತೆರೆದರೂ ಅಧಿಕಾರಿಗಳು ಮಾತ್ರ ಕಚೇರಿಗೆ ಆಗಮಿಸಲಿಲ್ಲ. ಆಯುಕ್ತರ ಸುತ್ತೋಲೆಗೆ ಅಧಿಕಾರಿಗಳೂ ಕೂಡಾ ಕಿಂಚಿತ್ತೂ ಬೆಲೆ ಕೊಟ್ಟಿಲ್ಲ.  ಬಜೆಟ್ ಅಧಿವೇಶನ ನಡೆಯುತ್ತಿದೆ. ಎರಡನೇ ಶನಿವಾರ ವಿದ್ದರು ಕೂಡ ರಜೆಯನ್ನು ರದ್ದುಗೊಳಿಸಿ ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪಾಲಿಕೆಯಲ್ಲೂ ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ, ಈ ಸೂಚನೆಗೆ ಯಾರೂ ಬೆಲೆ ಕೊಟ್ಟಂತಿಲ್ಲ ಬರಲಿಲ್ಲ. ಇಂದು ಬಿಬಿಎಂಪಿ ಕಚೇರಿ ತೆರೆದಿರುತ್ತದೆ ಎಂದು ಸಮಸ್ಯೆ ಹೇಳಿಕೊಳ್ಳಲು ಜನ ಬಂದರೂ ಯಾವುದೇ ಅಧಿಕಾರಿಗಳು ಇರಲಿಲ್ಲ. ಈ ರೀತಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಆಯುಕ್ತರು ಅದ್ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.

Facebook Comments