ತೆರಿಗೆ ಪಾವತಿಸದ ಕಟ್ಟಡಗಳ ಮೇಲೆ ಬಿಬಿಎಂಪಿ ಅಧಿಕಾರಿಗಳ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.28- ಕಳೆದ 10 ವರ್ಷಗಳಿಂದ ತೆರಿಗೆ ಪಾವತಿಸದ ವಾಣಿಜ್ಯ ಕಟ್ಟಡಗಳ ಮೇಲೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದರು. ಬಿಬಿಎಂಪಿ ರಾಜರಾಜೇಶ್ವರಿ ನಗರ ಕಂದಾಯಾಧಿಕಾರಿಗಳು ಇಂದು ಬೆಳಗ್ಗೆ ವಾಣಿಜ್ಯ ಕಟ್ಟಡ ಪ್ಲಾಟಿನಂ ಸಿಟಿ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿದರು.

1600 ವಸತಿಗಳಿರುವ ಅಪಾರ್ಟ್ ಮೆಂಟ್‍ನ ಎಸ್ ಬ್ಲಾಕ್ 162 ಯೂನಿಟ್ ಕಮರ್ಷಿಯಲ್ ಅಪಾರ್ಟ್ ಮೆಂಟ್ 10 ವರ್ಷದಿಂದ ತೆರಿಗೆ ಕಟ್ಟಿರಲಿಲ್ಲ.  ಈ ಅಪಾರ್ಟ್‍ಮೆಂಟ್ ಸುಮಾರು 22 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಬಿಬಿಎಂಪಿ ರಾಜರಾಜೇಶ್ವರಿ ಕಂದಾಯ ವಿಭಾಗ ಉಪ ಆಯುಕ್ತ ಕೆ.ಶಿವೇಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Facebook Comments