ಬಿಬಿಎಂಪಿಯ ಎಲ್ಲ ಕಚೇರಿಗಳಿಗೆ ಸಿಸಿ ಕ್ಯಾಮೆರಾ, ಸಿಬ್ಬಂದಿಗಳ ಆಟಕ್ಕೆ ಬ್ರೇಕ್…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.26-ಬಿಬಿಎಂಪಿಯ ಅವ್ಯವಹಾರಗಳ ಕಮಟು ಆಯುಕ್ತರಿಗೆ ತಟ್ಟಿತೋ ಏನೋ ಅದಕ್ಕಾಗಿಯೇ ಪಾಲಿಕೆಯ ಎಲ್ಲ ಕಚೇರಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದಾರೆ.  ಈ ಮೂಲಕ ಬಿಬಿಎಂಪಿ ಸಿಬ್ಬಂದಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಬ್ರೇಕ್ ಹಾಕಲು ಪಾಲಿಕೆ ಸಿದ್ದವಾಗಿದೆ.

ಪಾಲಿಕೆಯ ಮಾಹಿತಿಗಳನ್ನು ಗೌಪ್ಯವಾಗಿಡಲು ಮತ್ತು ಸಿಬ್ಬಂದಿಗಳ ಪಾರದರ್ಶಕತೆ ಕಾಪಾಡಲು ಆಯುಕ್ತರು ಮುಂದಾಗಿದ್ದು, ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲು ಸಿದ್ದತೆ ನಡೆಸಿದ್ದಾರೆ.

ಬಿಬಿಎಂಪಿ ಕಚೇರಿಗಳ ಹೊರಗೆ ಮತ್ತು ಒಳಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಸಿಸಿಟಿವಿ ವಿಡಿಯೋ ದಾಖಲಿಸಿಡುವಂತೆ ಆಯುಕ್ತ ಅನಿಲ್‍ಕುಮಾರ್ ಆದೇಶ ಹೊರಡಿಸಿದ್ದಾರೆ.  ವಾರಕ್ಕೊಮ್ಮೆ ವಿಡಿಯೋ ಪರಿಶೀಲಿಸಿ ವರದಿ ನೀಡಬೇಕೆಂದು ಅವರು ಸೂಚಿಸಿದ್ದಾರೆ. ಸಂಜೆ 7 ಗಂಟೆ ನಂತರ ಯಾರಿಗೂ ಪಾಲಿಕೆ ಆವರಣದಲ್ಲಿ ಇರಲು ಅವಕಾಶ ಇರುವುದಿಲ್ಲ.

ತುರ್ತು ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಬಂದಲ್ಲಿ ಹಿರಿಯ ಅಧಿಕಾರಿಗಳ ಅನುಮತಿಯನ್ನು ಸಿಬ್ಬಂದಿ ಪಡೆಯಬೇಕಾಗುತ್ತದೆ.  ಒಟ್ಟಾರೆ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಸಿಸಿ ಕ್ಯಾಮೆರಾ ಮೊರೆ ಹೋಗುತ್ತಿದ್ದಾರೆ.

Facebook Comments