ಬಿಬಿಎಂಪಿ ಆಸ್ತಿ ಸಂರಕ್ಷಣೆಗೆ ಆಡಳಿತಾಧಿಕಾರಿ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17- ಬಿಬಿಎಂಪಿ ಒಡೆತನದ ಆಸ್ತಿಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವುದು, ಸಂರಕ್ಷಣೆ ಮಾಡುವುದು ಹಾಗೂ ಅದರಿಂದ ಹೆಚ್ಚು ಸಂಪನ್ಮೂಲ ಕ್ರೋಢಿಕರಣ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕು. ಎಲ್ಲಾ ಆಸ್ತಿಗಳನ್ನು ಸರಿಯಾಗಿ ಸರ್ವೆ ಮಾಡಿ ಆ ಜÁಗಕ್ಕೆ ತಂತಿ ಬೇಲಿ ಅಳವಡಿಸಬೇಕು ಎಂದು ಆಡಳಿತಾಧಿಕಾರಿ ಗೌರವ್ ಗುಪ್ತ ಪಾಲಿಕೆ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದರು.

ಬಿಬಿಎಂಪಿ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಅವರು ಈ ಆದೇಶ ನೀಡಿದರು. ಸಭೆಯಲ್ಲಿ ಮಾತನಾಡಿದ ಆಸ್ತಿ ವಿಭಾಗದ ಉಪ ಆಯುಕ್ತ ಹರೀಶ್ ನಾಯ್ಕ್ ಅವರು, ಬಿಬಿಎಂಪಿಯ ಒಡೆತನದಲ್ಲಿ ಒಟ್ಟು 6,828 ಆಸ್ತಿಗಳಿದ್ದು, ಅವುಗಳಲ್ಲಿ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಈ ಪೈಕಿ 168 ಆಸ್ತಿಗಳು ಗುತ್ತಿಗೆ ಅವಧಿಯಲ್ಲಿದ್ದು, 156 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿರುತ್ತವೆ.

ಗುತ್ತಿಗೆ ಅವಧಿ ಮುಗಿದಿರುವ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಹಿಂಪಡೆದು, ಪ್ರಸ್ತುತ ಮಾರುಕಟ್ಟೆ ದರ ನಿಗಧಿಪಡಿಸಿ ಗುತ್ತಿಗೆ ನೀಡಲು ಕ್ರಮ ವಹಿಸಲಾಗುತ್ತದೆ ಎಂದರು. ಪಾಲಿಕೆ ಆಸ್ತಿಗಳ ನಿಖರ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಭೂಮಿ ಸಾ¥s್ಟï ವೇರ್ ಅಭಿವೃದ್ಧಿಪಡಿಸಿದೆ. ಎಲ್ಲ ಆಸ್ತಿಗಳಿಗೂ ಗುರುತಿನ ಸಂಖ್ಯೆನೀಡಲಾಗುತ್ತಿದೆ. ಈ ಪೈಕಿ ಈಗಾಗಲೇ 1700 ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಲಾಗಿದೆ. ಪಾಲಿಕೆ ಆಸ್ತಿಗಳನ್ನು ಸರ್ವೆ ಮಾಡಲು 4 ಮಂದಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಬಿಬಿಎಂಪಿಯ ಜಾಹೀರಾತು ವಿಭಾಗದಿಂದ ಪಾಲಿಕೆಗೆ ಬರುವ ಆದಾಯದ ಬಗ್ಗೆ ಮಾಹಿತಿ ಪಡೆದು ಜಾಹೀರಾತಿನಿಂದ ಪಾಲಿಕೆಗೆ ಹೆಚ್ಚು ಆದಾಯ ಬರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಜಾಹೀರಾತಿಗೆ ಸಂಬಂಧಿಸಿದಂತೆ ಹೊಸ ಬೈಲಾ ಜಾರಿಗೆ ತರಲಾಗಿದ್ದು, ನಗರದಲ್ಲಿ ವಾಣಿಜ್ಯ ಜಾಹೀರಾತು ಸಂಬಂಧಿಸಿದ ಹೋರ್ಡಿಂU್ಸï ಪ್ರದರ್ಶಿಸಲು ಅವಕಾಶವಿಲ್ಲ.

ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಸ್ಥಾಪಿಸಿರುವ ಬಸ್ ತಂಗುದಾಣ, ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್), ಸಾರ್ವಜನಿಕ ಶೌಚಾಲಯ ಹಾಗೂ ಪೆÇಲೀಸ್ ಚೌಕಿಗಳ ಬಳಿ ಮಾತ್ರ ಜÁಹೀರಾತು ಹಾಕಲು ಅವಕಾಶವಿದೆ ಎಂದು ವೆಂಕಟೇಶ್ ಮಾಹಿತಿ ನೀಡಿದರು. ಪಿಪಿಪಿ ಮಾದರಲ್ಲಿ ಜÁಹೀರಾತು ಅಳವಡಿಸಿರುವ ಸಂಖ್ಯೆ ಎಷ್ಟು, ಯಾರಿಗೆ ಗುತ್ತಿಗೆ ನೀಡಲಾಗಿದೆ, ಎಷ್ಟು ದರ ನಿಗದಿಪಡಿಸಲಾಗಿದೆ, ಅದರಿಂದ ಎಷ್ಟು ಆದಾಯ ಬರಲಿದೆ, ಗುತ್ತಿಗೆ ಅವಧಿ ಪೂರ್ಣಗೊಂಡಿರುವ ಬಗ್ಗೆ ಸಮರ್ಪಕ ಮಾಹಿತಿ ಪಡೆದು ಆದಾಯ ಹೆಚ್ಚಿಸಿಕೊಳ್ಳು ವಂತೆ ಗೌರವ್‍ಗುಪ್ತ ಸಲಹೆ ನೀಡಿದರು.

ಟಿಇಸಿ ವಿಭಾಗದಿಂದ ಆರ್ಟೀರಿಯಲï, ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಗಳನ್ನು ಸಮರ್ಪಕವಾಗಿ ಮಾಡಬೇಕು. ಸಾರ್ವಜನಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಡಳಿತಗಾರರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ 29 ಕಡೆ ಹೆಚ್ಚು ಅಪಘಾತ ಆಗುವ ಸ್ಥಳಗಳನ್ನು ಸಂಚಾರಿ ಪೆÇಲೀಸ್ ವಿಭಾಗವು ಗುರುತಿಸಿ ಮಾಹಿತಿ ನೀಡಿದೆ.

ಈ ಸಂಬಂಧ ಹೆಚ್ಚು ಅಪಘಾತಗಳಾಗುವ ಸ್ಥಳದಲ್ಲಿ ವೈಜ್ಞಾನಿಕ ರಸ್ತೆ ಉಬ್ಬು, ವೇಗ ಮಿತಿ ನಾಮಫಲಕ, ಲೈನ್ ಮಾರ್ಕಿಂಗ್, ಬ್ಯಾರಿಕೇಡಿಂಗ್, ಲೈಟಿಂಗ್, ರೇಡಿಯಂ ಅಳವಡಿಕೆ, ಗೋಡೆಗಳಿಗೆ ಬಣ್ಣ ಬಳಿಯುವುದು ಆಗುವ ಅಪಘಾತಗಳನ್ನು ಕಡಿಮೆ ಮಾಡಲು ಕ್ರಮ ವಹಿಸಲಾಗುವುದು ಎಂದು ಟಿಇಸಿ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಆಯ್ದ 6 ಹೈ ಡೆನ್ಸಿಟಿ ಕಾರಿಡಾರ್‍ಗಳ ಅಭಿವೃದ್ಧಿ, ನೂತನವಾಗಿ 14 ಸ್ಕೈವಾಕ್‍ಗಳ ನಿರ್ಮಾಣ, ಸೈಕಲ್ ಲೈನ್, ಪಾದಚಾರಿ ಮಾರ್ಗ, ಕಾಲುವೆ ಅಭಿವೃದ್ಧಿ ಕಾಮಗಾರಿ, 2212 ಬಸ್ ತಂಗುದಾಣಗಳನ್ನು ನಿರ್ಮಿಸ ಲಾಗುತ್ತಿದೆ ಎಂದರು.

ವಿಶೇಷ ಆಯುಕ್ತ ಜೆ.ಮಂಜುನಾಥ್, ಜಂಟಿ ಆಯುಕ್ತ ವೆಂಕಟೇಶ್, ಉಪ ಆಯುಕ್ತರಾದ ಹರೀಶ್ ನಾಯ್ಕ್, ನಾಗೇಂದ್ರ ನಾಯ್ಕ್, ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments