Thursday, March 28, 2024
Homeಬೆಂಗಳೂರು75 ಉಪವಿಭಾಗಗಳಾಗಿ ಬಿಬಿಎಂಪಿ ವಿಂಗಡಣೆ

75 ಉಪವಿಭಾಗಗಳಾಗಿ ಬಿಬಿಎಂಪಿ ವಿಂಗಡಣೆ

ಬೆಂಗಳೂರು,ಡಿ.30- ಬಿಬಿಎಂಪಿಯ 30 ಉಪವಿಭಾಗಗಳನ್ನು75 ಉಪ ವಿಭಾಗಗಳನ್ನಾಗಿ ವಿಂಗಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಸರ್ಕಾರ 198 ವಾರ್ಡ್ ಗಳಿದ್ದ ಬಿಬಿಎಂಪಿಯನ್ನು 225 ವಾರ್ಡ್ ಗಳನ್ನಾಗಿ ಪುನರ್ ರಚಿಸಿ ಆದೇಶಿಸಿತ್ತು ಇದೀಗ ಆಡಳಿತಾತ್ಮಕ ದೃಷ್ಟಿಯಿಂದ 75 ಉಪ ವಿಭಾಗಗಳಾಗಿ ವಿಂಗಡಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ

ಪಾಲಿಕೆಯ 225 ವಾರ್ಡ್‍ಗಳನ್ನ 75 ಕಂದಾಯ, ಆರೋಗ್ಯ, ಕಾಮಗಾರಿ ಉಪ ವಿಭಾಗಗಳಾಗಿ ವಿಂಗಡಣೆ ಮಾಡಿ ಪ್ರತಿ ಉಪ ವಿಭಾಗದಲ್ಲಿ ಎರಡರಿಂದ ನಾಲ್ಕು ವಾರ್ಡ್‍ಗಳಿರುವಂತೆ ವಿಂಗಡಣೆ ಮಾಡಲಾಗಿದೆ.8 ವಲಯಗಳಲ್ಲಿ 30 ವಿಭಾಗಗಳ ರಚನೆ, 30 ವಿಭಾಗಗಳಡಿ 75 ಉಪ ವಿಭಾಗಗಳಾಗಿ ವಿಂಗಡನೆ ಮಾಡಿ ಈ 75 ವಿಭಾಗಗಳಡಿ ಕೆಲಸ ನಿರ್ವಹಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ವಲಯ ವಿಭಾಗ ಉಪ ವಿಭಾಗ
ಬೊಮ್ಮನಹಳ್ಳಿ 3 9
ದಾಸರಹಳ್ಳಿ 2 4
ಪೂರ್ವವಲಯ 6 13
ಮಹದೇವಪುರ 2 9
ಆರ್.ಆರ್‍ನಗರ 3 7
ದಕ್ಷಿಣ 6 14
ಯಲಹಂಕ 2 6
ಪಶ್ಚಿಮ 6 13

RELATED ARTICLES

Latest News