ಜಲಮಂಡಳಿ ಎಂಜಿನಿಯರ್‌ಗೆ ಬಿಬಿಎಂಪಿ ಆಡಳಿತಾಧಿಕಾರಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25-ಕೊಳವೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ದುರಸ್ತಿ ಮಾಡದ ಜಲಮಂಡಳಿ ಎಂಜಿನಿಯರ್‍ಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ತರಾಟೆಗೆ ತೆಗೆದುಕೊಂಡರು. ತಡ ರಾತ್ರಿ ಅಧಿಕಾರಿಗಳೊಂದಿಗೆ ನಗರದ ವಿವಿಧ ಕಡೆ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ಜಲಮಂಡಳಿಯ ಎಂಜಿನಿಯರ್‍ಗೆ ತರಾಟೆಗೆ ತೆಗೆದುಕೊಂಡರು.

ನಗರದ ಕೆಂಪೇಗೌಡ ರಸ್ತೆಯ ಕಾವೇರಿ ಜಂಕ್ಷನ್ ನಿಂದ ತಪಾಸಣೆ ಆರಂಭಿಸಿ ಅರಮನೆ ರಸ್ತೆ, ಎಂಜಿ ರಸ್ತೆ ಸೇರಿದಂತೆ ಬಿಬಿಎಂಪಿ ಪೂರ್ವ ವಲಯದ ವಿವಿಧ ಕಡೆ ಭೇಟಿ ನೀಡಿದರು.

ಫ್ರೇಜರ್‍ಟೌನ್ ಬಳಿಯ ಅಸಾಯಿ ರಸ್ತೆಯಲ್ಲಿ ಜಲಮಂಡಳಿಯ ಕೊಳವೆ ಅಳವಡಿಕೆ ಕಾಮಗಾರಿ ಮುಗಿದ ಮೇಲೆ ಸರಿಯಾಗಿ ರಸ್ತೆ ದುರಸ್ತಿ ಮಾಡದ ಹಿನ್ನೆಲೆ ಜಲಂಡಳಿಯ ಎಂಜಿನಿಯರ್‍ಗೆ ತರಾಟೆಗೆ ತೆಗೆದುಕೊಂಡು ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಎಚ್ಚರಿಕೆ ನೀಡಿದರು.

ಇದಕ್ಕೂ ಮುನ್ನ ಕೆಂಪೇಗೌಡ ರಸ್ತೆಯಲ್ಲಿ ಯಂತ್ರಿಕ ಕಸ ಗುಡಿಸುವ ಯಂತ್ರ ಕೆಲಸ ಮಾಡುವ ಬಗ್ಗೆ ಪರಿಶೀಲನೆ ನಡೆಸಿದರು. ಯಂತ್ರ ಎಷ್ಟು ಸಮಯಕ್ಕೆ ಎಷ್ಟು ದೂರ ರಸ್ತೆ ಗುಡಿಸಲಿದೆ ಎಂದು ಪರೀಕ್ಷಿಸಿದರು. ಜೊತೆಗೆ ಯಂತ್ರದ ಜಿಪಿಎಸ್ ಸರಿಯಾಗಿ ಕಾರ್ಯನಿರ್ವಾಹಣೆ ಮಾಡಲಿದೆ ಎಂಬುದನ್ನು ಗಮನಿಸಿದರು.

ಬಳಿಕ ಅರಮನೆ ರಸ್ತೆಯಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆಯಲ್ಲಿ ಸಂಚರಿಸುವ ವಾಹನ ಮತ್ತು ಸಾರ್ಜನಿಕರಿಗೆ ತೊಂದರೆ ಉಂಟಾಗುವಂತೆ ಬ್ಯಾರಿಕೇಟ್ ಅಳವಡಿಕೆ ಮಾಡದಂತೆ ಸೂಚಿಸಿದರು.

ವಿದ್ಯುತ್ ದೀಪ, ರಸ್ತೆ ಗುಂಡಿ, ದುರಸ್ತಿ ಕಾರ್ಯ ಪರಿಶೀಲನೆ ನಡೆಸಿ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಎಂಜಿ ರಸ್ತೆ, ಹಲಸೂರು ಸೇರಿದಂತೆ ವಿವಿಧ ಕಡೆ ತಡರಾತ್ರಿ 1 ಗಂಟೆ ವರೆಗೂ ಪರಿಶೀಲನೆ ನಡೆಸಿದರು.

ಈ ವೇಳೆ ಬಿಬಿಎಂಪಿ ಪೂರ್ವ ವಿಭಾಗದ ಮುಖ್ಯ ಎಂಜಿನಿಯರ್ ಪ್ರಭಾಕರ್, ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‍ನಂದೀಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Facebook Comments

Sri Raghav

Admin