ಒಂದೆರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್ ಮಾದರಿಯಾಗಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25- ಒಂದೆರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್‍ನ್ನು ಮಾದರಿ ವಾರ್ಡ್ ಆಗಿ ಪರಿವರ್ತಿಸುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.
ಉಪಮೇಯರ್ ಭದ್ರೇಗೌಡ, ಮತ್ತಿತರರೊಂದಿಗೆ ಥಣಿಸಂದ್ರ ವಾರ್ಡ್‍ಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಾಮಾಜಿಕ ತಾಣಗಳಲ್ಲಿ ಥಣಿಸಂದ್ರ ವಾರ್ಡ್ ಅತಿ ಹಿಂದುಳಿದ ವಾರ್ಡ್ ಎಂದು ಬಿಂಬಿತವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಯಲಹಂಕ ವಲಯಕ್ಕೆ ಸಾಕಷ್ಟು ಅನುದಾನ ಸಿಕ್ಕಿದೆ. ಈಗ ಸಚಿವ ಕೃಷ್ಣಬೈರೇಗೌಡ ಕೂಡಾ ಈ ವಾರ್ಡ್ ಬಗ್ಗೆ ಆಸಕ್ತಿ ತೋರಿದ್ದಾರೆ.

ಅನುದಾನ ಬಳಸಿ ಒಳಚರಂಡಿ ವ್ಯವಸ್ಥೆ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ಎಲ್ಲವೂ ಪ್ರಗತಿಯಲ್ಲಿದೆ. ಇನ್ನೂ ಒಂದೆರಡು ವರ್ಷಗಳಲ್ಲಿ ಥಣಿಸಂದ್ರ ವಾರ್ಡ್ ಮಾದರಿ ವಾರ್ಡ್ ಆಗಲಿದೆ ಎಂದು ಮೇಯರ್ ವಿಶ್ವಾಸ ವ್ಯಕ್ತಪಡಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ