ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 55 ಬಿಬಿಎಂಪಿ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.18-ಬಿಬಿಎಂಪಿ ಸದಸ್ಯರು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವಾಗಿದ್ದರೂ 198 ಕಾರ್ಪೊರೇಟರ್‍ಗಳ ಪೈಕಿ 55 ಮಂದಿ ಇನ್ನು ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿಲ್ಲ. ಕೋಲಾರ ಸಂಸದ/ಕಾರ್ಪೊರೇಟರ್ ಮುನಿಸ್ವಾಮಿ, ಮಾಜಿ ಮೇಯರ್‍ಗಳಾದ ಸಂಪತ್‍ರಾಜ್, ಜಿ.ಪದ್ಮಾವತಿ ಸೇರಿದಂತೆ 55 ಮಂದಿ ಕಾರ್ಪೊರೇಟರ್‍ಗಳು ಇದುವರೆಗೂ ಆಸ್ತಿ ವಿವರ ಸಲ್ಲಿಸದೆ ಮೊಂಡಾಟ ಆಡುತ್ತಿದ್ದಾರೆ.

ಬಿಬಿಎಂಪಿ ಸದಸ್ಯರಾದ ನೇತ್ರಪಲ್ಲವಿ, ಎಂ.ಸತೀಶ್, ಮುನಿಂದ್ರ ಕುಮಾರ್, ನಾಗಭೂಷಣ್, ಎನ್.ಲೋಕೇಶ್, ನರಸಿಂಹ ನಾಯಕ್,ಪ್ರಮೀಳಾ, ಆನಂದ್‍ಕುಮಾರ್, ರಾಜಶೇಖರ್, ಇರ್ಷದ್ ಬೇಗಂ, ನೌಸೀರ್ ಅಹಮ್ಮದ್, ಅಬ್ದುಲ್ ವಾಜೀದ್, ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ಕೆ.ವಿ.ರಾಜೇಂದ್ರಕುಮಾರ್, ಎಂ.ಮಹದೇವ, ಗಣೇಶ್‍ರಾವ್ ಮಾನೆ, ಎಸ್.ರಾಜು, ಕೆ.ಪೂರ್ಣಿಮಾ, ವಿ.ಸುರೇಶ್, ಅರುಣಾ ರವಿ, ಭುವನೇಶ್ವರಿ, ಮಹಮ್ಮದ್ ಜಮೀರ್ ಷಾ, ಹೇಮಲತಾ ಸತೀಶ್ ಸೇಠ್, ಎಚ್.ಮಂಜುನಾಥ್, ಗಂಗಮ್ಮ ರಾಜಣ್ಣ, ಅಬ್ದುಲ್ ರಕೀಬ್ ಜಾಕೀರ್, ಆನಂದಕುಮಾರ್, ನಿತೀಶ್ ಪುರುಷೋತ್ತಮ್, ಎಸ್.ಮುನಿಸ್ವಾಮಿ, ಮಮತಾ ಸರವಣ, ಶಕೀಲ್ ಅಹಮ್ಮದ್, ಫರಿದಾ, ಗೋವಿಂದರಾಜು,

ಉಮಾವತಿ ಪದ್ಮರಾಜ್, ಶಿಲ್ಪಾ.ಜಿ, ದೀಪಾ ನಾಗೇಶ್, ಡಿ.ಪ್ರಮೋದ್, ದಾಸೇಗೌಡ, ತೇಜಸ್ವಿನಿ,ಇಮ್ರಾನ್ ಪಾಷ, ಸೀಮಾ ಅಲ್ತಫ್, ಜನೀಮಾ ಖಾನಂ, ಡಿ.ಎನ್.ರಮೇಶ್, ಪುಷ್ಪಾ .ಜಿ.ಎಂ, ಕೆಂಪೇಗೌಡ, ಅನುಪಮ, ಅನ್ಸರ್ ಪಾಷ, ನಾರಾಯಣರಾಜು, ಕೆ.ಸೋಮಶೇಖರ್ ಮತ್ತಿತರರು ಅವಧಿ ಮೀರಿದರೂ ಇದುವರೆಗೂ ಆಸ್ತಿ ವಿವರ ಸಲ್ಲಿಸದೆ ಕಾನೂನು ಉಲ್ಲಂಘಿಸಿದ್ದಾರೆ.

ನಾವು ಆಯ್ಕೆಯಾದ ನಂತರ ಮೇಯರ್ ಅವರಿಗೆ ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸುತ್ತಿದ್ದೇವೆ. ಲೋಕಾಯುಕ್ತಕ್ಕೆ ವಿವರ ಸಲ್ಲಿಸುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಸದಸ್ಯರು ವಾದಿಸಿದ್ದರು. ಆದರೆ ಬಿಬಿಎಂಪಿ ಸದಸ್ಯರ ಈ ವಾದಕ್ಕೆ ಮನ್ನಣೆ ನೀಡದ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಲೇಬೇಕು. ಇಲ್ಲದಿದ್ದಲ್ಲಿ ನೋಟಿಸ್ ಜಾರಿ ಮಾಡಲಾಗುವುದು.

ಮಾತ್ರವಲ್ಲ ರಾಜ್ಯಪಾಲರ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ನಂತರ ಪಾಲಿಕೆ ಸದಸ್ಯರ ತಮ್ಮ ಆಸ್ತಿ ವಿವರ ಸಲ್ಲಿಸಲು ಮನಸ್ಸು ಮಾಡಿದ್ದರು. 198 ಸದಸ್ಯರ ಪೈಕಿ ಕೇವಲ 143 ಸದಸ್ಯರು ಮಾತ್ರ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ಉಳಿದ 55 ಮಂದಿ ಆಸ್ತಿ ವಿವರ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ.

ಆಸ್ತಿ ವಿವರ ಸಲ್ಲಿಸದೆ ಲೋಕಾಯುಕ್ತ ಆದೇಶಕ್ಕೂ ಕ್ಯಾರೇ ಎನ್ನದ ಬಿಬಿಎಂಪಿ ಸದಸ್ಯರ ವಿರುದ್ಧ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಅವರು ಮೃದುಧೋರಣೆ ತಳಿಯದೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಲೋಕಾಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ