ಬಿಬಿಎಂಪಿ ವ್ಯಾಪ್ತಿಯ ಅನಧಿಕೃತ ಜಾಹಿರಾತು ಹೋರ್ಡಿಂಗ್ಸ್ ತೆರವು
ಕೆ ಆರ್ ಪುರ , ಜೂ.29-ಅನಧಿಕೃತವಾಗಿ ತಲೆ ಎತ್ತಿದ್ದ ಬೃಹತ್ ಹೋರ್ಡಿಂಗ್ಸ್ಗಳನ್ನು ಇಂದು ತೆರವುಗೊಳಿಸಲಾಯಿತು. ಕೆ ಆರ್ ಪುರ ಕ್ಷೇತ್ರದ ದೇವಸಂದ್ರ ವಾರ್ಡ್ನ ಐಟಿಐ ಬಳಿ ಬೃಹತ್ ಆಕಾರದ ಎರಡು ಹೋರ್ಡಿಂಗ್ಸ್ಗಳನ್ನು ಜಂಟಿ ಆಯುಕ್ತರಾದ ವಾಸಂತಿ ಅಮರ್ ಅವರ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸ್ಥಳದಲ್ಲಿದ್ದು, ತೆರವುಗೊಳಿಸಿದರು.
ಬಿಬಿಎಂಪಿಯಿಂದ ಅನುಮತಿ ಪಡೆದಿದ್ದೇವೆ ಎಂದು ಹೋರ್ಡಿಂಗ್ಸ್ ಮಾಲೀಕ ಐಟಿಐ ಅವರಿಂದ ಅನುಮತಿ ಪಡೆದು ಮೇ 11 ರ ರಾತ್ರಿ ಹೋರ್ಡಿಂಗ್ಸ್ ಅಳವಡಿಸಿದ್ದರು. ಹೋರ್ಡಿಂಗ್ಸ್ ಅಳವಡಿಸುವ ಸಂದರ್ಭದಲ್ಲೇ ಸ್ಥಳೀಯ ಪಾಲಿಕೆ ಸದಸ್ಯ ಶ್ರೀಕಾಂತ್ ಅಡ್ಡಿಪಡಿಸಿದ್ದರೂ ಸಹ ಕೆಲವರಿಂದ ಧಮ್ಕಿ ಹಾಕಿಸಿ ಹೋರ್ಡಿಂಗ್ಸ್ಗಳನ್ನು ಅಳವಡಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಸದಸ್ಯ ಶ್ರೀಕಾಂತ್, ದೇವಸಂದ್ರ ವಾರ್ಡ್ನ ಐಟಿಐ ಗ್ರೌಂಡ್ ಪಕ್ಕದಲ್ಲಿ ಎರಡು ಅನಧಿಕೃತ ಹೋರ್ಡಿಂಗ್ಸ್ಗಳನ್ನು ಅಳವಡಿಸಿ ಬಿಬಿಎಂಪಿಗೆ ಮೋಸ ಮಾಡಲು ಮುಂದಾಗಿದ್ದರು. ಮಹಾರಾಷ್ಟ್ರದಿಂದ ಕಂಪನಿಯೊಂದು ಏ.12 ರಂದು ಹೋರ್ಡಿಂಗ್ಸ್ ಹಾಕಲು ಬಂದಾಗ ಕೆಲಸ ಸ್ಥಗಿತಗೊಳಿಸಿದ್ದವು. ಆಗ ಕೆಲ ರೌಡಿಗಳಿಂದ ಫೋನ್ ಮೂಲಕ ಧಮ್ಕಿ ಹಾಕಿಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ ಎಂದರು. ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಧಿಕೃತ ಹೋರ್ಡಿಂಗ್ಸ್ಗಳು ತಲೆ ಎತ್ತಿದೆ. ಮೇ 11 ರಂದು ರಾತ್ರೋರಾತ್ರಿ ಈ ಹೋರ್ಡಿಂಗ್ಸ್ ಅಳವಡಿಸಿದ್ದರು. ಮಹಾರಾಷ್ಟ್ರದ ಎಂಎಲ್ಸಿ ಸೇರಿದಂತೆ ಹಲವು ರೌಡಿಗಳಿಂದ ಧಮ್ಕಿ ಸಹ ಬಂದಿದೆ. ಅಪಿಲ್ ಕಮಿಟಿ ಮೆಂಬರ್ ಆದ ನಂತರ ಬೆಂಗಳೂರಿನ ಸುತ್ತ ಇರುವ ಅನಧಿಕೃತ ಹೋರ್ಡಿಂಗ್ಸ್ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಂಟಿ ಆಯುಕ್ತರಿಗೆ ಅನಧಿಕೃತ ಬಗ್ಗೆ ದೂರು ನೀಡಿದ್ದರಿಂದ ಪರಿಶೀಲಿಸಿ ತೆರವಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.