ಬೆಂಗಳೂರಲ್ಲಿ ಅ.15ರವರೆಗೂ ನಾಯಿ ಗಣತಿ ಕಾರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ನಗರದಲ್ಲಿ ಜಿಯೋ ಟ್ಯಾಗ್ ಮೂಲಕ ನಾಯಿಗಳ ಗಣಿತ ಕಾರ್ಯ ಆರಂಭಿಸಿದ್ದೇವೆ. ಅ.15ರವರೆಗೂ ನಾಯಿಗಣತಿ ನಡೆಯಲಿದ್ದು, ಆ ನಂತರ ಎಬಿಸಿ ಶಸ್ತ್ರ (ಅ್ಞಜಿಞZ್ಝ ಆಜ್ಟಿಠಿe ಇಟ್ಞಠ್ಟಿಟ್ಝ ) ಚಿಕಿತ್ಸೆ ನಡೆಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಾಯೋಗಿಕವಾಗಿ 25 ವಾರ್ಡ್‍ಗಳಲ್ಲಿ ಜಿಯೋ ಟ್ಯಾಗ್ ನಾಯಿ ಗಣತಿ ಆರಂಭಿಸಿದ್ದೇವೆ. ಅದಕ್ಕಾಗಿ ಶ್ವಾನ ಎಂಬ ಆ್ಯಪ್ ಮಾಡಲಾಗಿದೆ. ಈ ಮೂಲಕವೇ ಗಣತಿ ಮಾಡಬೇಕಿದೆ. ಅ.15ರ ನಂತರ ಬಿಬಿಎಂಪಿ ಸಿಬ್ಬಂದಿ ನಾಯಿಗಳನ್ನು ಹಿಡಿದು ಎಬಿಸಿ ಶಸ್ತ್ರ ಚಿಕಿತ್ಸೆ ಮಾಡಿ ಯಾವ ಪ್ರದೇಶದಿಂದ ತರಲಾಗುವುದೋ ಅದೇ ಏರಿಯಾಗೆ ಬಿಡಲಾಗುತ್ತದೆ ಎಂದರು.

ಪಶುಸಂಗೋಪನಾ ಇಲಾಖೆಯ ತಜ್ಞರನ್ನು ಬಳಕೆ ಮಾಡಲಾಗುತ್ತದೆ. ಏಳು ವರ್ಷಗಳ ಹಿಂದೆ ಗಣತಿ ಮಾಡಲಾಗಿತ್ತು. ಈಗ ಮತ್ತೆ ಗಣತಿ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿ ನಾಯಿ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.

#ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ:
ಬೆಳ್ಳಳ್ಳಿ ಕ್ವಾರಿಯಲ್ಲಿ ತ್ಯಾಜ್ಯ ಶೀಘ್ರ ಭರ್ತಿಯಾಗಲಿದೆ. ಅಲ್ಲಿನ ಜನರು ಈ ಪ್ರದೇಶ ಅಭಿವೃದ್ಧಿ ಪಡಿಸುವಂತೆ ಪ್ರತಿಭಟನೆ ಮಾಡಿದ್ದಾರೆ. ಹಾಗಾಗಿ 15 ಕೋಟಿ ಬಿಡುಗಡೆ ಮಾಡಲಾಗಿದೆ.
ಆ ಕ್ವಾರಿ ಭರ್ತಿಯಾದ ನಂತರ ಮಿಟ್ಟಗಾನಹಳ್ಳಿ ಯಲ್ಲಿರುವ ಕ್ವಾರಿ ಬಳಸಲಾಗುತ್ತದೆ. ಇದು ಆರು ತಿಂಗಳು ಬರುತ್ತದೆ. ನಂತರ ಅದರ ಪಕ್ಕದಲ್ಲೇ ಮತ್ತೊಂದು ಕ್ವಾರಿ ನೋಡಿದ್ದೇವೆ. ಇದೂ ಕೂಡಾ ಒಂದು ವರ್ಷ ಬರುತ್ತದೆ. ಇದು ಮುಗಿಯುವುದರಲ್ಲಿ ಬಾಗಲೂರು, ಹುಲ್ಲಹಳ್ಳಿಯ ಎರಡು ಕಡೆ ಭೂ ಗರ್ಭ ಗುರುತಿಸಲಾಗಿದೆ. ಆದ್ದರಿಂದ ಕಸ ವಿಲೇವಾರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಂದೀಪ್ ತಿಳಿಸಿದರು.

#ಶೀಘ್ರವೇ ಸ್ಮಾರ್ಟ್ ಕಂಟ್ರೋಲ್ ರೂಂ:
ಸಮರ್ಪಕ ಕಸ ವಿಲೇವಾರಿಗೆ ಶೀಘ್ರವೇ ಸ್ಮಾರ್ಟ್ ಕಂಟ್ರೋಲ್ ರೂಮ್ ತೆರೆಯಲಾಗುತ್ತದೆ. ಕೆಲ ಮನೆಗಳಿಗೆ ಆರ್‍ಐಎಫ್‍ಡಿ ಅಂಟಿಸುತ್ತೇವೆ. ಕಸ ಸಂಗ್ರಹಿಸುವ ವಾಹನಗಳವರು ಸ್ಕ್ಯಾನಿಂಗ್ ಮಾಡಿಸಿಯೇ ಮುಂದೆ ಹೋಗಬೇಕು. ಹಾಗಾಗಿ ಕಸ ಸಂಗ್ರಹಣೆಯಲ್ಲಿ ಲೋಪವಾಗುವುದು ತಪ್ಪಲಿದೆ. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

Facebook Comments