ಬಿಬಿಎಂಪಿಗೆ ನಿಗದಿತ ಅವಧಿಯಲ್ಲೇ ಚುನಾವಣೆ: ಸಚಿವ ಆರ್ ಅಶೋಕ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.8-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿಗದಿತ ಅವಧಿಯಲ್ಲೇ ಚುನಾವಣೆ ನಡೆಸಲು ಸಕಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವಾರ್ಡ್‍ಗಳ ಮರು ವಿಂಗಡಣೆ ನಂತರ ಸರ್ಕಾರದ ಆದೇಶದ ಪ್ರಕಾರ ಮೀಸಲಾತಿ ನಿಗದಿಪಡಿಸಲಾಗುತ್ತದೆ. ಆನಂತರ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲಾಗುತ್ತದೆ ಎಂದರು. ಕೇಂದ್ರ ರಾಜ್ಯ ಹಾಗೂ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು ಮತ್ತೆ 5 ವರ್ಷಗಳ ಕಾಲ ಬಿಜೆಪಿಯೇ ಆಡಳಿತ ನಡೆಸಬೇಕೆಂಬುದು ಆ ಪಕ್ಷದ ಅಪೇಕ್ಷೆಯಾಗಿದೆ ಎಂದರು.

ಖಾತೆ ಬಗ್ಗೆ ಕ್ಯಾತೆ ಇಲ್ಲ: ನೂತನ ಸಚಿವರಾರು ನಿರ್ಧಿಷ್ಟ ಖಾತೆಗೆ ಬೇಡಿಕೆ ಇಟ್ಟಿಲ್ಲ. ಕೆಲವರು ಮನವಿ ಮಾಡಿರಬಹುದು. ಆದರೆ ಮನವಿಗೂ ಬೇಡಿಕೆಗೂ ವ್ಯತ್ಯಾಸವಿದೆ ಎಂದರು.
ಮುಖ್ಯಮಂತ್ರಿಗಳು ಖಾತೆ ಹಂಚಿಕೆ ಮಾಡುವುದಾಗಿ ಘೊಷಣೆ ಮಾಡಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಹೊಂದಿರುವ ಅನುಭವ, ಕಾರ್ಯ ವೈಖರಿ, ಶ್ರದ್ದಾನುಸಾರ ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ಅವರ ಕಾರ್ಯ ವೈಖರಿ ನೋಡಿ ಮುಂದೆ ಖಾತೆಯಲ್ಲಿ ಬದಲಾವಣೆ ಮಾಡಬಹುದು ಎಂದರು.

ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿಗೆ ಬಂದಿದ್ದರ ಫಲವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಂದಿನ ಮೂರು ವರ್ಷಗಳ ಕಾಲ ಜನಮೆಚ್ಚುವಂತಹ ಆಡಳಿತ ನೀಡಬೇಕಿದೆ ಎಂದರು.

Facebook Comments