ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳು ಐ ಪಾಡ್ ಹಿಂತಿರುಗಿಸದಿದ್ದರೆ ಚುನಾವಣೆಗೆ ಸ್ಫರ್ಧಿಸುವಂತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ಐ-ಪಾಡ್ ಹಿಂದಿರುಗಿಸದ ಮಾಜಿ ಕಾಪೆರ್ರೇಟರ್‍ಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ ಪ್ರಸಾದ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಪಡೆದ ಐ-ಪಾಡ್‍ಗಳನ್ನು ಹಿಂದಿರುಗಿಸುವಂತೆ ಸೂಚಿಸಲಾಗಿತ್ತು. 198 ವಾರ್ಡ್‍ಗಳ ಸದಸ್ಯರಲ್ಲಿ 20 ರಿಂದ 25 ಸದಸ್ಯರು ಮಾತ್ರ ಐ-ಪಾಡ್ ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.

ಉಳಿದ ಸದಸ್ಯರಿಗೆ ಎರಡು-ಮೂರು ಬಾರಿ ನೋಟಿಸ್ ನೀಡಿದರೂ ಐ-ಪಾಡ್‍ಗಳನ್ನು ಈವರೆಗೆ ಹಿಂದಿರುಗಿಸಿಲ್ಲ. ಹೀಗಾಗಿ ಮತ್ತೆ ನೋಟಿಸ್ ನೀಡಲಾಗಿದ್ದು, ಐ-ಪಾಡ್ ಹಿಂದಿರುಗಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಜನಪ್ರತಿನಿಧಿಗಳು ತಮ್ಮ ಆಡಳಿತಾವಧಿಯಲ್ಲಿ ಸರ್ಕಾರದಿಂದ ಪಡೆಯುವ ಕಾರು, ಲ್ಯಾಪ್‍ಟಾಪ್, ಮೊಬೈಲ್, ಐ-ಪಾಡ್ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ತಮ್ಮ ಆಡಳಿತಾವಧಿ ಮುಗಿದ ಮೇಲೆ ಸರ್ಕಾರಕ್ಕೆ ನಿಗದಿತ ಅವಧಿಯಲ್ಲಿ ಹಿಂದಿರುಗಿಸಬೇಕು. ಹಿಂದಿರುಗಿಸದಿದ್ದರೆ ಮುಂದೆ ಚುನಾವಣೆಗೆ ನಿಲ್ಲುವ ಅರ್ಹತೆ ಕಳೆದುಕೊಳ್ಳುತ್ತಾರೆ.

ಬಹುತೇಕ ಮಾಜಿ ಸದಸ್ಯರು ನೋಟಿಸ್ ನೀಡಿದರೂ ಐ-ಪಾಡ್‍ಗಳನ್ನು ಹಿಂದಿರುಗಿಸಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ತಾನಾಗಿಯೇ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಆಯುಕ್ತರು ಸೂಚನೆ ನೀಡಿದ್ದಾರೆ. ಈಗಲಾದರೂ ಹಿಂದಿರುಗಿಸದಿದ್ದರೆ ಮುಂದೆ ಅವರಿಗೆ ಕಷ್ಟವಾಗುತ್ತದೆ.

Facebook Comments