ಶಿಲಾನ್ಯಾಸ ಫಲಕದಲ್ಲಿ ಮಾಜಿ ಮೇಯರ್ ಗಂಗಾಂಬಿಕೆ ಹೆಸರು ನಮೂದಿಸುವಂತೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ಚಾಲುಕ್ಯ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಪ್ರತಿಮೆಯ ಪ್ರಾಕಾರವನ್ನು ಮರುವಿನ್ಯಾಸಗೊಳಿಸಲು ಕಾರಣಕರ್ತರಾದ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಹೆಸರನ್ನು ಶಿಲಾನ್ಯಾಸ ಫಲಕದಲ್ಲಿ ಮುಖ್ಯಅತಿಥಿ ಅಡಿಯಲ್ಲಿ ನಮೂದಿಸಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಯುವ ಘಟಕದ ಜಿ. ಮನೋಹರ ಅಬ್ಬಿಗೆರೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು,ಗಂಗಾಂಬಿಕೆ ಮಲ್ಲಿಕಾರ್ಜುನ್ ರವರು ಬಹಳ ಮುತುವರ್ಜಿ ವಹಿಸಿ ಈ ಕಾರ್ಯವನ್ನು ಮಾಡಿದ್ದರು, ಅದ್ದರಿಂದ ಇವರ ಹೆಸರನ್ನು ಶಿಲಾನ್ಯಾಸ ಫಲಕದಲ್ಲಿ ಮುಖ್ಯಅತಿಥಿ ಅಡಿಯಲ್ಲಿ ನಮೂದಿಸುವುದರಿಂದ ನಮ್ಮ ಸಮುದಾಯಕ್ಕೆ ಗೌರವ ನೀಡಿದಂತಾಗುತ್ತದೆ.

ಹಾಗೂ ಸಮುದಾಯದ ಜನರ ಮತ್ತು ಬಸವಾದಿ ಶರಣರ ಅನುಯಾಯಿಗಳ ಅಶಯವೂ ಆಗಿದೆ. ಇದನ್ನು ಪರಿಗಣಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಇದೇ 26ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ ಗೊಳ್ಳುತ್ತಿರುವುದು ಸಂತೋಷದ ವಿಚಾರ. ಪ್ರತಿಮೆ ನಿರ್ಮಾಣಕ್ಕೆ ಸಂಪೂರ್ಣ ಮೊತ್ತವನ್ನು ಮಹಾಪೌರರ ವಿವೇಚನೆ ನಿಯಡಿ ಗಂಗಾಂಬಿಕೆ ಒದಗಿಸಿದ್ದರು.

ಪ್ರಸ್ತುತ ಮರುವಿನ್ಯಾಸಗೊಳ್ಳುತ್ತಿರುವ ಸಂದರ್ಭದಲ್ಲಿ ಅವರನ್ನು ಕಡೆಗಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಂಗಾಂಬಿಕೆಯವರು ಪ್ರತಿಮೆಯ ಮರುವಿನ್ಯಾಸಕ್ಕಾಗಿ ಬಸವ ಸಮಿತಿಯೊಂದಿಗೆ ಅನೇಕ ಬಾರಿ ಸಮಾಲೋಚಿಸಿ, ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮತ್ತು 12ನೇ ಶತಮಾನದ ವಚನ ಸಾಹಿತ್ಯವನ್ನು ಒಳಗೊಳ್ಳುವಂತೆ ಶಿಲಾಸ್ಥಂಭ, ಅರ್ಧ ಚಂದ್ರಾಕಾರದ ಬೃಹತ್ ಗೋಡೆ, ವಿಶಿಷ್ಟ ದೀಪ ವಿನ್ಯಾಸವನ್ನು ಅಕಾರಿಗಳು ಮತ್ತು ವಿನ್ಯಾಸಗಾರರೊಂದಿಗೆ ಅಂತಿಮಗೊಳಿಸಿ ತಮ್ಮ ಮಹಾಪೌರರ ಅವಯಲ್ಲಿ ಶೇ.70 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಿದ್ದರು.

ಬಸವಣ್ಣನವರ ಪ್ರತಿಮೆಯನ್ನು ಬಸವ ತತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಅವರು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

Facebook Comments

Sri Raghav

Admin