ಬೆಂಗಳೂರಲ್ಲಿ ಮರಗಳಿಗೆ ಮೊಳೆ ಹೊಡೆಯುವುದು ಶಿಕ್ಷಾರ್ಹ ಅಪರಾಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ನಗರದಲ್ಲಿ ಇನ್ನು ಮುಂದೆ ಮರಗಳಿಗೆ ಮೊಳೆ ಹೊಡೆಯುವುದು ಶಿಕ್ಷಾರ್ಹ ಅಪರಾಧ. ಮರಗಳ ಮೇಲೆ ಜಾಹೀರಾತು ಫಲಕ ಅಳವಡಿಕೆ, ಮರಗಳಿಗೆ ಮೊಳೆ ಹೊಡೆಯುವುದು, ಸ್ಟ್ಯಾಪ್ಲರ್ ಪಿನ್ ಹೊಡೆಯುವುದನ್ನು ನಿಷಿದ್ಧ ಮಾಡಿ ಬಿಬಿಎಂಪಿ ಅರಣ್ಯ ಘಟಕ ಮಹತ್ವದ ಆದೇಶ ನೀಡಿದೆ.

ವಿದ್ಯುತ್ ದೀಪ, ಕೇಬಲ್ ಅಳವಡಿಕೆಗೂ ನಿರ್ಬಂಧ ವಿಧಿಸಲಾಗಿದೆ. ಕಟ್ಟಡ ನಿರ್ಮಾಣ ಹಂತದಲ್ಲಿ ಕಬ್ಬಿಣದ ರಾಡನ್ನು ಕೂಡ ಹೊಡೆಯುವಂತಿಲ್ಲ. ಮೊಳೆ, ಸ್ಟ್ಯಾಪ್ಲರ್ ಹೊಡೆಯುವುದರಿಂದ ಮರಗಳಿಗೆ ಹಾನಿಯಾಗುವ ಆತಂಕ ಇದೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ-1976 ಕಲಂ 8ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಾಗಿದ್ದು, ಕೂಡಲೇ ಮರಗಳ ಮೇಲಿರುವ ಜಾಹೀರಾತು ಕೇಬಲ್‍ಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.

Facebook Comments