ಓಮಿಕ್ರಾನ್ ಎಫೆಕ್ಟ್ : ಬಿಬಿಎಂಪಿಗೆ ಹರಿದುಬರುತ್ತಿದೆ ಹಣದ ಹೊಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಓಮಿಕ್ರಾನ್ ವೈರಸ್ ಭೀತಿ ಒಂದೆಡೆಯಾದರೆ, ಬಿಬಿಎಂಪಿಗೆ ಹಣದ ಹೊಳೆ ಹರಿದು ಬರುತ್ತಿದೆ. ಕಳೆದ ಮೂರು ದಿನಗಳಲ್ಲಿ ಆರು ಲಕ್ಷ ಹಣ ಬಂದಿದೆ. ಓಮಿಕ್ರಾನ್ ವೈರಸ್ ಹರಡುವುದನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಹಾಕದೇ ಓಡಾಡುತ್ತಿರುವವರಿಂದ ಮಾರ್ಷಲ್‍ಗಳು ದಂಡ ವಸೂಲಿಗೆ ಇಳಿದಿದ್ದು, ಮೂರು ದಿನಗಳಲಿಂದ ಆರು ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದ್ದಾರೆ.

ಮಾಸ್ಕ್ ಹಾಕದೇ ಓಡಾಡುತ್ತಿದ್ದವರಿಂದ 5,32,250 ರೂ. ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ 28 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಇದುವರೆಗೆ ಪಾಲಿಕೆ ಬರೋಬ್ಬರಿ 14,80,96,211 ರೂ.ಗಳನ್ನು ವಸೂಲಿ ಮಾಡಿದೆ.

Facebook Comments