ಬೆಂಗಳೂರಿನ ಪ್ರಥಮ ಪ್ರಜೆ ಬಂಧನವಾಗಿರುವುದು ಇದೇ ಮೊದಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.17- ನಗರದ ಪ್ರಥಮ ಪ್ರಜೆಯೊಬ್ಬರು ಕ್ರಿಮಿನಲ್ ಆರೋಪದಲ್ಲಿ ಬಂಧನಕ್ಕೊಳಗಾ ಗಿರುವುದು ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.  ಟೌನ್ ಮುನ್ಸಿಪಲ್ ಆಗಿದ್ದ ಬೆಂಗಳೂರು ನಂತರ ನಗರಸಭೆ, ಕಾಪೆರ್ರೇಷನ್, ಬಿಎಂಪಿ ಹಾಗೂ ಬಿಬಿಎಂಪಿ ಆಗಿ ಪುನಾರಚನೆಗೊಂಡಿದ್ದು, ಇದುವರೆಗೂ 53 ಮಹಾನು ಭಾವರು ಬೆಂಗಳೂರಿನ ಪ್ರಥಮ ಪ್ರಜೆಯಾಗಿ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.

ಮಹಾಪೌರರಾದ ನಂತರ ಹಲವಾರು ಮಹನೀಯರು ರಾಜಕೀಯದ ಹಲವು ಮಜಲುಗಳನ್ನು ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಇಂತಹ ಉನ್ನತ ಹಿನ್ನೆಲೆ ಹೊಂದಿರುವ ಮಾಜಿ ಮೇಯರ್ ಒಬ್ಬರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರ ಬಂಧನಕ್ಕೊಳಗಾಗುವ ಮೂಲಕ ಬಿಬಿಎಂಪಿ ಖ್ಯಾತಿಗೆ ಕಪ್ಪು ಮಸಿ ಬಳಿದಿದ್ದಾರೆ.

ಈ ಹಿಂದೆ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಒಬ್ಬ ಮಹಾನುಭಾವರು ಧರಣಿ ಸತ್ಯಾಗ್ರಹಕ್ಕೆ ಮೇಯರ್ ಗೌನ್ ಧರಿಸಿ ಹೋಗಿದ್ದರು. ಯಾವುದೇ ಪ್ರತಿಭಟನೆಗಳಲ್ಲಿ ಪ್ರಥಮ ಪ್ರಜೆಯಾದವರು ಮೇಯರ್ ಗೌನ್ ಧರಿಸಿ ಪಾಲ್ಗೊಳ್ಳುವಂತಿಲ್ಲ. ಈ ನಿಯಮ ಮೀರಿ ಮೇಯರ್ ಒಬ್ಬರು ಬಂಧನಕ್ಕೊಳಗಾಗಬೇಕಿತ್ತು. ಆದರೆ, ಬಂಧನ ಭೀತಿಯಿಂದ ಅವರು ಬಚಾವ್ ಆಗಿದ್ದರು. ಇದೀಗ ಸಂಪತ್‍ರಾಜ್ ಅವರು ಪೊಲೀಸರ ಬಂಧನಕ್ಕೊಳಗಾಗುವ ಮೂಲಕ ಬಿಬಿಎಂಪಿಗೆ ಅಪಖ್ಯಾತಿ ತಂದಿದ್ದಾರೆ.

Facebook Comments