ಬಿಬಿಎಂಪಿಯಲ್ಲಿ ‘ಕಿಂಗ್ ಮೇಕರ್‌ಗಗಳಾಗಿದ್ದವರು ಇಂದು ಪುಲ್ ಸೈಲೆಂಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.01- ಇವರು ಕಿಂಗ್ ಮೇಕರ್‍ಗಳಾಗಿದ್ದವರು, ಹುಲಿಗಳಂತೆ ಬರುತ್ತಿದ್ದರು. ಇವರು ಬಂದರೆ ಎಲ್ಲರೂ ಸೆಲ್ಯೂಟ್ ಹೊಡೆದು ಜಾಗ ಬಿಡುತ್ತಿದ್ದರು. ಆದರೆ ಇಂದು ಗೇಟ್‍ನಿಂದ ಒಳಗೇ ಬಿಡಲಿಲ್ಲ. ಇದು ಇಂದು ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ನಡೆದ ಅನರ್ಹ ಶಾಸಕರ ಪರಿಸ್ಥಿತಿ.

ಕಳೆದ ನಾಲ್ಕು ವರ್ಷಗಳ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಭೈರತಿಬಸವರಾಜ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಇವರೇ ಕಿಂಗ್ ಮೇಕರ್‍ಗಳು. ಇವರು ಹೇಳಿದ ಅಭ್ಯರ್ಥಿಗಳೇ ಮೇಯರ್-ಉಪಮೇಯರ್, ಸ್ಥಾಯಿಸಮಿತಿ ಅಧ್ಯಕ್ಷರಾಗಬೇಕಿತ್ತು.

ಆದರೆ ಇಂದು ಬಿಬಿಎಂಪಿಯಲ್ಲಿ ನಡೆದ ಮೇಯರ್-ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ಹಲವರನ್ನು ಪಾಸ್ ಇಲ್ಲ ಎಂದು ಪೊಲೀಸರು ಒಳಗೆ ಬಿಡಲು ಸತಾಯಿಸಿದ್ದು, ಸೋಜಿಗವೆನಿಸಿತು. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಜೊತೆ ಬಂದ ಮುನಿರತ್ನ ಅವರನ್ನು ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದರು. ಅಶ್ವತ್ಥನಾರಾಯಣ ಅವರು ಒಳಗೆ ಹೋದರು, ಮುನಿರತ್ನ ಅಲ್ಲಿಯೇ ನಿಲ್ಲಬೇಕಾಯಿತು. ನಂತರ ಅವರನ್ನು ಒಳಗೆ ಬಿಡಲಾಯಿತು. ಕೌನ್ಸಿಲ್ ಹಾಲ್‍ನೊಳಗೆ ಕೂಡ ಪ್ರವೇಶ ಇರಲಿಲ್ಲ.

ಇದು ಕಿಂಗ್ ಮೇಕರ್‍ಗಳಾಗಿದ್ದವರ ಪರಿಸ್ಥಿತಿ ಹೇಗಾಯಿತು ನೋಡಿ ಎಂದು ಪಾಲಿಕೆ ಆವರಣದಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದು ಕೇಳಿಬಂತು. ಇವರು ಬಿಜೆಪಿಗೆ ಬೆಂಬಲ ಕೊಟ್ಟರೂ ಬಿಜೆಪಿಯವರೇ ಇವರನ್ನು ಕೇರ್ ಮಾಡುತ್ತಿಲ್ಲವಲ್ಲ ಎಂದು ಹಲವರು ಗುಸುಗುಸು ಎನ್ನುತ್ತಿದ್ದರು.

Facebook Comments