ಡಿಜೆಹಳ್ಳಿ ಗಲಭೆ : ಬಿಬಿಎಂಪಿ ಸದಸ್ಯರಾದ ಸಂಪತ್‍ರಾಜ್, ಝಾಕಿರ್ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.18- ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಸಿದಂತೆ ಇಬ್ಬರು ಕಾಂಗ್ರೆಸ್ ಕಾರ್ಪೊರೇಟರ್ ಗಳನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಾಜಿ ಮೇಯರ್ ಹಾಗೂ ಡಿಜೆ ಹಳ್ಳಿ ಕಾರ್ಪೊರೇಟರ್ ಸಂಪತ್‍ರಾಜ್ ಹಾಗೂ ಪುಲಿಕೇಶಿನಗರ ವಾರ್ಡ್ ಸದಸ್ಯ ಅಬ್ದುಲ್ ರಾಖಿಬ್ ಝಾಕಿರ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಅಪರಾಧ  ವಿಭಾಗದ ಡಿಸಿಪಿ ಕೆ.ಸಿ.ರವಿಕುಮಾರ್ ಈ ಸಂಜೆಗೆ ತಿಳಿಸಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಚಾಮರಾಜಪೇಟೆ ಸಿಸಿಬಿ ಕಚೇರಿಯಲ್ಲಿ ಈ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಬಂತ ಆರೋಪಿಗಳ ಜತೆ ಹೊಂದಿರುವ ಸಂಪರ್ಕ, ಘಟನೆ ನಡೆದ ದಿನ, ತಾವು ಎಲ್ಲಿದ್ದೀರ, ಯಾರ ಜತೆ ಮಾತನಾಡಿದ್ದೀರ ಮುಂತಾದ ಪ್ರಶ್ನೆಗಳನ್ನು ಕೇಳಿ ತನಿಖಾಕಾರಿಗಳು ಉತ್ತರ ಪಡೆಯುತ್ತಿದ್ದಾರೆ.

ಘಟನೆ ತಮಗೆ ಗೊತ್ತಾಗಿದ್ದು ಯಾವಾಗ, ಗಲಭೆಕೋರರೊಂದಿಗೆ ನಿಮಗೆ ಸಂಪರ್ಕವಿದೆಯೇ? ಇತ್ಯಾದಿ ಪ್ರಶ್ನೆಗಳನ್ನು ಕೇಳಿ ತನಿಖಾಕಾರಿಗಳು ಉತ್ತರ ಪಡೆದಿದ್ದಾರೆ.

ವಿಚಾರಣೆ ಮುಂದುವರಿದಿದ್ದು, ಘಟನೆಗೆ ಇವರು ಕಾರಣವಾದ ಪೂರಕವಾದ ಸಾಕ್ಷ್ಯಾಧಾರಗಳಿದ್ದರೆ ಮಾತ್ರ ಹೆಚ್ಚಿನ ವಿಚಾರಣೆ ಅಗತ್ಯ ಕಂಡುಬಂದರೆ ಇವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇಲ್ಲದಿದ್ದರೆ ವಿಚಾರಣೆ ನಡೆಸಿ ಇವರನ್ನು ಕಳುಹಿಸಿಕೊಡಲಿದ್ದಾರೆ .

ಘಟನೆಗೆ ಸಂಬಂಸಿದಂತೆ ಮಾಜಿ ಮೇಯರ್ ಸಂಪತ್‍ರಾಜ್ ಆಪ್ತ ಸಹಾಯಕರೊಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Facebook Comments

Sri Raghav

Admin