35 ಸಾವಿರ ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು 2 ಕೋಟಿಗೂ ಹೆಚ್ಚು ದಂಡ ವಿಧಿಸಿದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9-ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಕಂಕಣ ತೊಟ್ಟಿರುವ ಬಿಬಿಎಂಪಿ ಪ್ರಸಕ್ತ ಸಾಲಿನಲ್ಲಿ 37,577 ಕೆ.ಜಿ. ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು 2, 12, 39,141 ಕೋಟಿ ರೂ.ಗಳ ದಂಡ ವಸೂಲಿ ಮಾಡಿದೆ. ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಾ ಚರಣೆಯನ್ನು ತೀವ್ರಗೊಳಿಸಲಾಗಿದ್ದು, ಅಕ್ಟೋಬರ್ ತಿಂಗಳಿನವರೆಗೆ 37 ಸಾವಿರ ಕೆ.ಜಿ. ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು 2 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ಟ್ವಿಟ್ ಮಾಡಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಕಾರ್ಯಾಚರಣೆಯನ್ನು ಮುಂದು ವರೆಸಿದ್ದು , ಪ್ಲಾಸ್ಟಿಕ್ ಉತ್ಪನ್ನ ಬಳಕೆ ಮಾಡುವವರ ಮೇಲೆ ಗದಪ್ರಹಾರ ಮಾಡು ವುದರ ಜತೆಗೆ ನಾಗರಿಕರು ಪ್ಲಾಸ್ಟಿಕ್ ಬದಲಿಗೆ ಉತ್ಪನ್ನಗಳನ್ನು ಬಳಸುವ ಕುರಿತಂತೆಯೂ ತಿಳು ವಳಿಕೆ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಗರದ 8 ವಲಯಗಳಲ್ಲೂ ಕಾರ್ಯಾಚರಣೆ ಮುಂದುವರೆದಿದೆ. ಯಲಹಂಕದಲ್ಲಿ 4,249 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು 7,66,330 ರೂ. ದಂಡ ವಸೂಲಿ ಮಾಡಲಾಗಿದೆ.
ದಾಸರಹಳ್ಳಿ ವಲಯದಲ್ಲಿ 3,699 ಕೆ.ಜಿ. ಪ್ಲಾಸ್ಟಿಕ್ ಸೀಜ್ ಮಾಡಿ 5,35,700ರೂ. ದಂಡ, ಪಶ್ಚಿಮ ವಲಯದಲ್ಲಿ 3,583 ಕೆ.ಜಿ. ಪ್ಲಾಸ್ಟಿಕ್ ವಶ , 21,57,600 , ದಕ್ಷಿಣ ವಲಯದಲ್ಲಿ 5,046 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು, 14,77,201 ಲಕ್ಷ ದಂಡ , ರಾಜರಾಜೇಶ್ವರಿ ನಗರದಲ್ಲಿ 7,201ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 4,67,200,

ಬೊಮ್ಮನಹಳ್ಳಿಯಲ್ಲಿ 3,453 ಕೆ.ಜಿ. ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಿಕೊಂಡು 14,77,201 , ಮಹದೇವಪುರದಲ್ಲಿ 8,310 ಕೆ.ಜಿ. ಪ್ಲಾಸ್ಟಿಕ್ ವಶಪಡಿಸಿಕೊಂಡು , 21,21,700 ರೂ. ದಂಡ ಹಾಗೂ ಪೂರ್ವ ವಲಯದಲ್ಲಿ 2,036 ಕೆ.ಜಿ. ಪ್ಲಾಸ್ಟಿಕ್ ಉತ್ಪನ್ನಗಳನ್ನು ಸೀಜ್ ಮಾಡಿ, 1,17,29, 510 ಕೋಟಿ ರೂ. ದಂಡ ವಿಧಿಸಲಾಗಿದ್ದು , ಒಟ್ಟಾರೆ 35,577 ಕೆ.ಜಿ. ರೂ. ಪ್ಲಾಸ್ಟಿಕ್ ಸೀಜ್ ಮಾಡಿ 2,12,39141 ಕೋಟಿ ರೂ.ಗಳ ದಂಡ ವಸೂಲಿ ಮಾಡಲಾಗಿದೆ ಎಂದು ರಂದೀಪ್ ವಿವರಣೆ ನೀಡಿದ್ದಾರೆ.

Facebook Comments