ಪ್ಲಾಸ್ಟಿಕ್‍ಗೆ ಅಂತ್ಯ ಹಾಡಲು ಪ್ಲಾಗ್‍ರನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, – ನಗರಕ್ಕೆ ತಲೆನೋವಾಗಿ ಪರಿಣಮಿಸಿರುವ ಪ್ಲಾಸ್ಟಿಕ್‍ಗೆ ಮುಕ್ತಿ ಹಾಡುವ ಉದ್ದೇಶದಿಂದ ಅ.2ರ ಗಾಂಧಿ ಜಯಂತಿ ಯಂದು ಪ್ಲಾಗ್‍ರನ್ ಆಯೋಜಿಸ ಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಬಿಎಂಪಿ, ಯುನೈಟೆಡ್ ವೇ ಇಂಡಿಯಾ ಮತ್ತು ಗೋ ನೇಟಿವ್ ಸಹಯೋಗದಲ್ಲಿ ನಡೆಯಲಿರುವ ಈ ಪ್ಲಾಸ್ಟಿಕ್ ಆಂದೋಲನಕ್ಕೆ ಏರ್ ಬಿಎನ್‍ಬಿ, ಪೆಪ್ಸಿಕೊ ಫ್ಯಾಬ್ ಹೋಟೆಲ್ ಮತ್ತು ಸ್ವಚ್ಛ ಭಾರತ ಅಭಿಯಾನದ ನೆರವು ಇದೆ.

ನಗರದಲ್ಲಿ ಪ್ರತಿನಿತ್ಯ 4 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತದೆ. ಇದರಲ್ಲಿ ಶೇ.20ರಷ್ಟು ಪ್ಲಾಸ್ಟಿಕ್ ಉತ್ಪನ್ನಗಳು ಇರುತ್ತವೆ. 2016ರಲ್ಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಪ್ಲಾಸ್ಟಿಕ್ ಸಮಸ್ಯೆಗೆ ಮುಕ್ತಿ ಹಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.  ಪ್ಲಾಸ್ಟಿಕ್ ಉತ್ಪನ್ನಗಳ ಕಡಿವಾಣಕ್ಕೆ ಚಾಲನೆ ನೀಡಲು ಪ್ಲಾಗ್ ರನ್ ಆಯೋಜಿಸಲಾಗಿದೆ.

ಅ.2ರಂದು ದೇಶದ 50 ನಗರಗಳಲ್ಲಿ ಈ ರನ್ ನಡೆಯಲಿದೆ. ಹಾಗಾಗಿ ನಾವು ಕೂಡ ಹಮ್ಮಿಕೊಂಡಿದ್ದೇವೆ ಎಂದರು.2018ರಲ್ಲಿ ನಡೆದ ಫ್ಲಾಗ್ ರನ್‍ನಲ್ಲಿ ಪಾಲ್ಗೊಂಡಿದ್ದ 7 ಸಾವಿರ ಮಂದಿ ಕೇವಲ 12 ಗಂಟೆಗಳಲ್ಲಿ 33.4 ಟನ್ ಪ್ಲಾಸ್ಟಿಕ್ ಸಂಗ್ರಹಿಸಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಈ ಬಾರಿಯು ಹೊಸ ದಾಖಲೆ ನಿರ್ಮಿಸುವ ಉದ್ದೇಶದಿಂದ ಇನ್ನು ಹೆಚ್ಚು ಪ್ಲಾಸ್ಟಿಕ್ ಉತ್ಪನ್ನ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಇಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗೆ ಬಳಕೆ ಮಾಡಲಾಗುವುದು ಎಂದರು. ಮರು ಬಳಕೆಗೆ ಬಾರದ ಕಸವನ್ನು ಸಿಮೆಂಟ್ ಕಾರ್ಖಾನೆಗೆ ರವಾನಿಸ ಲಾಗುತ್ತದೆ. ಪ್ಲಾಸ್ಟಿಕ್ ಉತ್ಪನ್ನಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುವುದು ಎಂದು ಹೇಳಿದರು.

www. indiaploog. run  ವೆಬ್‍ಸೈಟ್ ಮೂಲಕ ಈ ರನ್‍ನಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಬಹುದು. ಎಲ್ಲರಿಗೂ ಗ್ಲೌಸ್, ಮಾಸ್ಕ್ , ಏಪ್ರನ್ ಕೊಡಲಾಗುತ್ತದೆ.ವೈಯಕ್ತಿಕವಾಗಿ ಅಥವಾ ಕುಟುಂಬ ಸಮೇತರಾಗಿಯೂ ಭಾಗವಹಿಸ ಬಹುದು ಎಂದು ತಿಳಿಸಿದರು.  ಹೆಚ್ಚು ಮಂದಿ ಭಾಗವಹಿಸಿ ಪ್ಲಾಸ್ಟಿಕ್ ಸಮಸ್ಯೆ ನಿವಾರಣೆಗೆ ಕೈ ಜೋಡಿಸಬೇಕೆಂದು ಆಯುಕ್ತರು ಮನವಿ ಮಾಡಿದರು.

Facebook Comments