ಚೀನಾ ಸ್ಟೈಲಲ್ಲಿ ‘ತಗಡು’ ಐಡಿಯಾ ಮಾಡಿ ಕ್ಷಮೆ ಕೇಳಿದ ಬಿಬಿಎಂಪಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.24-ಕೊರೊನಾ ಸೋಂಕಿತನ ಮನೆ ಬಾಗಿಲಿಗೆ ತಗಡಿನ ಸೀಟ್ ಹಾಕಿ ಸೀಲ್‍ಡೌನ್ ಮಾಡಿರುವ ಘಟನೆ ದೊಮ್ಮಲೂರಿನಲ್ಲಿ ನಡೆದಿದೆ.

ಬಿಬಿಎಂಪಿ ಅಧಿಕಾರಿಗಳ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಾರ್ವಜನಿಕರ ಕ್ಷಮೆ ಯಾಚಿಸಿರುವ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಸೀಲ್‍ಡೌನ್ ತೆರವುಗೊಳಿಸಿ ತಪ್ಪಿತಸ್ಥರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ದೊಮ್ಮಲೂರಿನ ಖಾಸಗಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.ಹೀಗಾಗಿ ಸ್ಥಳಕ್ಕೆ ತೆರಳಿದ ಬಿಬಿಎಂಪಿ ಅಧಿಕಾರಿಗಳು ಸೋಂಕಿತನ ಮನೆಗೆ ತಗಡಿನ ಸೀಟ್ ಹಾಕಿ ಸೀಲ್‍ಡೌನ್ ಮಾಡಿದ್ದಲ್ಲದೆ ಕಂಟೈನ್ಮೆಂಟ್ ವಲಯವೆಂದು ಬೋರ್ಡ್ ಹಾಕಿದ್ದರು.

ಮನೆಯ ಬಾಗಿಲಿಗೆ ಸೀಟ್‍ನಿಂದ ಸೀಲ್‍ಡೌನ್ ಮಾಡಿರುವುದನ್ನು ವಿರೋಧಿಸಿ ಸತೀಶ್ ಎಂಬುವರು ಟ್ವಿಟ್ ಮಾಡಿದ್ದರು. ಅವರ ಟ್ವಿಟ್‍ಗೆ ಸಾವಿರಾರು ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದರು.

ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಟ್ವಿಟರ್‍ನಲ್ಲೇ ಕ್ಷಮೆಯಾಚಿಸಿದ್ದಾರೆ ಹಾಗೂ ತಪ್ಪಿತಸ್ಥರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

Facebook Comments

Sri Raghav

Admin