ನಾಳೆ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದು ತಲಾ 11 ಸದಸ್ಯರ ಆಯ್ಕೆಯಾದ ಬೆನ್ನಲ್ಲೇ ನಾಳೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಮೇಯರ್ ಗೌತಮ್ ಕುಮಾರ್, ಉಪ ಮೇಯರ್ ಮೋಹನ್‍ರಾಜ್ ನೇತೃತ್ವದಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ. ಲೆಕ್ಕಪತ್ರ ಸ್ಥಾಯಿ ಸಮಿತಿ ಹಾಗೂ ತೋಟಗಾರಿಕಾ ಸಮಿತಿಯ ಅಧ್ಯಕ್ಷರ ಆಯ್ಕೆಗೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಈ ಎರಡು ಸಮಿತಿಯನ್ನು ಹೊರತುಪಡಿಸಿ ಉಳಿದ 10 ಸಮಿತಿಗಳ ಅಧ್ಯಕ್ಷರ ಆಯ್ಕೆಯಾಗಲಿದೆ.

ತೆರಿಗೆ ಸ್ಥಾಯಿ ಸಮಿತಿ: ಮಾಜಿ ಉಪ ಮಹಾಪೌರ ಬಿ.ಭದ್ರೇಗೌಡ, ಮಹಾಲಕ್ಷ್ಮಿ ರವೀಂದ್ರ, ಎಂ.ಸತೀಶ್, ಬಿ.ಎನ್.ನಿತಿನ್ ಪುರುಷೋತ್ತಮ್, ದೇವದಾಸ್, ಭಾಗ್ಯಲಕ್ಷ್ಮಿ ಮುರುಳಿ, ಎಸ್. ಉದಯಕುಮಾರ್, ಕೇಶವ ಮೂರ್ತಿ, ವಸಂತಕುಮಾರ್, ಅನ್ಸರ್ ಪಾಷ ಅವರುಗಳು ಸದಸ್ಯರಾಗಿದ್ದು , ಕುಮಾರಸ್ವಾಮಿ ಬಡಾವಣೆಯ ಬಿಜೆಪಿ ಸದಸ್ಯ ಹಾಗೂ ಮಾಜಿ ಉಪ ಮಹಾಪೌರ ಎಲ್.ಶ್ರೀನಿವಾಸ್ ಅವರು ಈ ಸಮಿತಿಯ ಅಧ್ಯಕ್ಷರಾಗಲಿದ್ದಾರೆ.

ಆರೋಗ್ಯ ಸ್ಥಾಯಿ ಸಮಿತಿ: ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಜಿ.ಮಂಜುನಾಥ ರಾಜು ಅವರು ಆಯ್ಕೆಯಾಗಲಿದ್ದು, ಆರ್.ಪ್ರತಿಮಾ, ಶ್ರೀಕಾಂತ್,ಶಿಲ್ಪಾ ಶ್ರೀಧರ್, ಎಂ.ಪ್ರಮಿಳಾ, ಮಧುಕುಮಾರಿ ವಾಗೀಶ್, ಇರ್ಷಾದ್ ಬೇಗಂ, ಮೀನಾಕ್ಷಿ , ಆರ್.ರೂಪಾ, ಶಿಲ್ಪಾ ಅಭಿಲಾಷ್, ಶೋಭಾ ಜಗದೀಶ್ ಗೌಡ ಸದಸ್ಯರಾಗಿರುತ್ತಾರೆ. ನಗರ ಯೋಜನೆ: ಆಶಾ ಸುರೇಶ್ ಅವರು ಈ ಸಮಿತಿಯ ಅಧ್ಯಕ್ಷರಾಗಲಿದ್ದು , ಟಿ.ವಿ.ಮಂಜುನಾಥ್ ಬಾಬು, ಆನಂದ್‍ಕುಮಾರ್, ರಾಮಚಂದ್ರ, ಡಿ.ಎಚ್.ಲಕ್ಷ್ಮಿ, ರಾಜಣ್ಣ, ಎಂ.ಶಶಿರೇಖಾ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣ, ಎನ್.ರಾಜಶೇಖರ್ ಸದಸ್ಯರಾಗಿರುತ್ತಾರೆ.

ಬೃಹತ್ ಕಾಮಗಾರಿ: ನಾಗರಬಾವಿ ವಾರ್ಡ್‍ನ ಮೋಹನ್‍ಕುಮಾರ್ ಬೃಹತ್ ಕಾಮಗಾರಿ ಸಮಿತಿಯ ಅಧ್ಯಕ್ಷರಾಗಲಿದ್ದು, ಹರಿಪ್ರಸಾದ್, ಪ್ರಮೋದ್,ಚಂದ್ರಕಲಾ, ತೇಜಸ್ವಿನಿ, ಪಲ್ಲವಿ, ಕುಮಾರಿ ಪಳನಿಕಾಂತ್, ಸಿ.ಸರಳಾ ಮಹೇಶ್ ಬಾಬು, ಕೆಂಪೇಗೌಡ, ಪಳನಿಯಮ್ಮ ,ಕೆ.ವಿ.ರಾಜೇಂದ್ರ ಕುಮಾರ್ ಸದಸ್ಯರಾಗಿರುತ್ತಾರೆ.

ಶಿಕ್ಷಣ ಸ್ಥಾಯಿ ಸಮಿತಿ: ಈ ಸಮಿತಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಲಗ್ಗೆರೆ ವಾರ್ಡ್‍ನ ಮಂಜುಳಾ ನಾರಾಯಣಸ್ವಾಮಿ ಅವರು ಅಧ್ಯಕ್ಷರಾಗಲಿದ್ದಾರೆ. ಮಾಜಿ ಅಧ್ಯಕ್ಷ ಇಮ್ರಾನ್ ಪಾಷ, ಎಸ್.ಲೀಲಾ ಶಿವಕುಮಾರ್, ಹೇಮಲತಾ, ಸತೀಶ್ ಸೇಠ್, ಭವ್ಯ, ಸತ್ಯನಾರಾಯಣ, ಸರ್ವಮಂಗಳಾ, ಕೆ.ಮಮತಾ , ಜಿ.ವಿ.ಶಶಿಕಲಾ, ಮಂಜುನಾಥ ರೆಡ್ಡಿ ಸದಸ್ಯರಾಗಿರುತ್ತಾರೆ.

ಅಪೀಲು ಸ್ಥಾಯಿ ಸಮಿತಿ: ಪಕ್ಷೇತರ ಸದಸ್ಯ ಸಿ.ಆರ್. ಲಕ್ಷ್ಮೀನಾರಾಯಣ್ ಅವರು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವೇಲು ನಾಯಕರ್, ಜೈಪಾಲ್, ವೀಣಾ ಕುಮಾರಿ, ವಾಣಿ.ವಿ.ರಾವ್,ಅಜ್ಮಲ್ ಬೇಗ್, ಆರ್.ಸಂಪತ್‍ರಾಜ್, ಅಬ್ದುಲ್ ಜಾಕಿರ್, ಶಕೀಲ್ ಅಹಮದ್, ಸುಮಂಗಲಾ, ಉಮ್ಮೇ ಸಲ್ಮಾ ಸದಸ್ಯರಾಗಿರುತ್ತಾರೆ.
ಅದೇ ರೀತಿ ಮಾರುಕಟ್ಟೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ , ಸಾಮಾಜಿಕ ನ್ಯಾಯ,ಲೆಕ್ಕ ಪತ್ರ ಸ್ಥಾಯಿ ಸಮಿತಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೂ ಚುನಾವಣೆ ನಡೆಯಲಿದೆ.

Facebook Comments