ಬಿಗ್ ನ್ಯೂಸ್ : ಬಿಬಿಎಂಪಿಯ 198 ವಾರ್ಡ್‍ಗಳಿಗೆ ಮೀಸಲಾತಿ ಪ್ರಕಟ, ಇಲ್ಲಿದೆ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.14-ಒಂದೆಡೆ ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸುವ ಬಗ್ಗೆ ಶಾಸಕ ನೇತೃತ್ವದ ಸದನ ಸಮಿತಿ ಸಭೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಬಿಬಿಎಂಪಿಯ 198 ವಾರ್ಡ್‍ಗಳಿಗೆ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.

ವಾರ್ಡ್‍ಗಳ ಸಂಖ್ಯೆ ಹೆಚ್ಚಳ, ಮೇಯರ್ ಅಕಾರಾವ 30 ತಿಂಗಳಿಗೆ ಏರಿಕೆ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳನ್ನು ಮಾಡುವ ಮೂಲಕ ಚುನಾವಣೆಯನ್ನು ಮುಂದೂಡಲು ಸರ್ಕಾರ ಒಂದೆಡೆ ತಂತ್ರ ಹೆಣೆಯುತ್ತಿದೆ. ಮತ್ತೊಂದೆಡೆ ಹಾಲಿ ಇರುವ 198 ವಾರ್ಡ್‍ಗಳಿಗೆ ಮೀಸಲಾತಿಯನ್ನು ಪ್ರಕಟಿಸಿದೆ.

ನಿಗದಿತ ಕಾಲಾವಯಲ್ಲಿ ಚುನಾವಣೆ ನಡೆಸಬೇಕೆಂದು ಬಿಬಿಎಂಪಿ ಮಾಜಿ ಸದಸ್ಯರಾದ ಶಿವರಾಜ್, ವಾಜೀದ್, ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಯಬೇಕಿದೆ.

ಈ ಮಧ್ಯೆ 198 ವಾರ್ಡ್‍ಗಳಿಗೆ ಮೀಸಲಾತಿ ಪ್ರಕಟಿಸಿದೆ. ಅದರಂತೆ ಕೆಂಪೇಗೌಡ ವಾರ್ಡ್‍ಗೆ ಬಿಸಿಬಿ ಮಹಿಳೆ, ಚೌಡೇಶ್ವರಿ ವಾರ್ಡ್-ಬಿಸಿಬಿ ಅಟ್ಟೂರು, ಬಿಸಿಎ- ಯಲಹಂಕ ಉಪನಗರ- ಸಾಮಾನ್ಯ ಮಹಿಳೆ, ಕೋಗಿಲು ಹಿಂದುಳಿದ ವರ್ಗ ಮಹಿಳೆ, ಥಣಿಸಂದ್ರ-ಸಾಮಾನ್ಯ ಮಹಿಳೆ, ಜಕ್ಕೂರು-ಸಾಮಾನ್ಯ, ಆಂಜನೇಯ ಸ್ವಾಮಿ -ಪರಿಶಿಷ್ಟ ಪಂಗಡ, ಅಮೃತಹಳ್ಳಿ- ಸಾಮಾನ್ಯ, ಕೊಡಿಗೆಹಳ್ಳಿ- ಹಿಂದುಳಿದ ವರ್ಗ ಎ, ವಿದ್ಯಾರಣ್ಯಪುರ- ಸಾಮಾನ್ಯ ಸೇರಿದಂತೆ ಎಲ್ಲಾ 198 ವಾರ್ಡ್‍ಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.

ಹಲವು ವಾರ್ಡ್‍ಗಳ ಬದಲಾವಣೆ, ಮೀಸಲಾತಿ ಬದಲಾವಣೆ, ಹಲವು ವಾರ್ಡ್‍ಗಳಿಗೆ ಮಹಿಳೆಯರಿಗೆ ಮೀಸಲಾಗಿರುವುದು, ಕೆಲವು ವಾರ್ಡ್‍ಗಳಲ್ಲಿ ಸಾಮಾನ್ಯ ಮೀಸಲು ಬದಲಾಗಿ ಹಿಂದುಳಿದ ವರ್ಗ ಮೀಸಲು ಈ ರೀತಿ ಅನೇಕ ಬದಲಾವಣೆಗಳನ್ನು ಮಾಡಿ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

 

 

 

 

 

Facebook Comments

Sri Raghav

Admin