ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಅಸೂಚನೆ ಪ್ರಕಟ, ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ಬಿಬಿಎಂಪಿ ಆಡಳಿತಾವ ಅಂತ್ಯಗೊಳ್ಳಲು ಎರಡು ತಿಂಗಳು ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ 2011ರ ಜನಗಣತಿ ಪ್ರಕಾರ ವಾರ್ಡ್ ಪುನರ್ವಿಂಗಡಣೆ ಮಾಡಿ ಅಸೂಚನೆ ಹೊರಡಿಸಿದೆ.

ಹಾಲಿ ಬಿಬಿಎಂಪಿ ಆಡಳಿತಾವ ಸೆಪ್ಟೆಂಬರ್ 10ರಂದು ಕೊನೆಗೊಳ್ಳಲಿದ್ದು, ಈಗಾಗಲೇ ವಾರ್ಡ್ ಪುನರ್ವಿಂಗಡಣೆ ಅಸೂಚನೆ ಹೊರಬಿದ್ದಿರುವುದರಿಂದ ಶೀಘ್ರದಲ್ಲೇ ಬಿಬಿಎಂಪಿಗೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ.

198 ವಾರ್ಡ್‍ಗಳ ಸಂಖ್ಯೆ ಹಾಗೆಯೇ ಇರಲಿದ್ದು, ಕೆಲ ಸಣ್ಣಪುಟ್ಟ ವಾರ್ಡ್‍ಗಳನ್ನು ಕೈಬಿಟ್ಟು ಕೆಲವು ವಾರ್ಡ್‍ಗಳ ಹೆಸರು ಬದಲಾವಣೆ ಮಾಡಿ 198 ವಾರ್ಡ್‍ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಕೋಗಿಲು, ಗುಂಡಾಂಜನೇಯ ದೇವಸ್ಥಾನ, ಅಮೃತಹಳ್ಳಿ, ರಾಮಚಂದ್ರಪುರ, ಚಿಕ್ಕಸಂದ್ರ, ಬೃಂದಾವನ ನಗರ, ಹೆಣ್ಣೂರು, ಚಳ್ಳಕೆರೆ, ಕಲ್ಕೆರೆ, ಜೆಸಿ ನಗರ, ಮಾರುತಿನಗರ, ಸುಂಕದಕಟ್ಟೆ, ಗೊಲ್ಲರಪಾಳ್ಯ ಹೊಸಳ್ಳಿ, ಸರ್.ಎಂ.ವಿಶ್ವೇಶ್ವರಯ್ಯ, ಶೇಷಾದ್ರಿಪುರಂ, ವೈಟ್‍ಫೀಲ್ಡ್, ಮಾರೇನಹಳ್ಳಿ, ಹನುಮಗಿರಿ ದೇವಸ್ಥಾನ, ಕಲ್ಯಾಣನಗರ, ನಾಗದೇವನಹಳ್ಳಿ, ದೊಡ್ಡಕನ್ನಹಳ್ಳಿ, ಧರ್ಮಗಿರಿ ಮಂಜುನಾಥ ಸ್ವಾಮಿ, ಸುಬ್ರಹ್ಮಣ್ಯಪುರ, ಕೂಡ್ಲು, ದೇವರಚಿಕ್ಕನಹಳ್ಳಿ ಹಾಗೂ ಕಾಳೇನ ಅಗ್ರಹಾರಗಳು ಹೊಸ ವಾರ್ಡ್‍ಗಳಾಗಿವೆ.

Facebook Comments

Sri Raghav

Admin