IMA ಕರ್ಮಕಾಂಡ ಬೆಳಗಿಗೆ ಬಂದಾಗಿನಿಂದ ಬಿಬಿಎಂಪಿ ಮಾಜಿ ಮೇಯರ್ ಮಿಸ್ಸಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 13- ಐಎಂಎ ಸಂಸ್ಥೆ ವಂಚನೆ ಪ್ರಕರಣದ ಎಫೆಕ್ಟೋ ಏನೋ ಮಾಜಿ ಮೇಯರ್ ಸಂಪತ್‍ರಾಜ್ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಸಂಪತ್‍ರಾಜ್ ಅವರಿಗೂ ಐಎಂಎ ಸಂಸ್ಥೆಗೂ ನಂಟಿದೆ ಎಂದು ಹೇಳಲಾಗುತ್ತಿದ್ದು, ಸಂಪತ್‍ರಾಜ್ ಅವರು, ತಮ್ಮ ಬಾಮೈದುನನ ಒಡೆತನದ ಅಡೋನೈ ಶೆಲ್ಟರ್ ಕಂಪನಿ ಮೂಲಕ ಐಎಂಎ ಸಂಸ್ಥೆ ನಿರ್ಮಿಸುತ್ತಿರುವ 14 ಸ್ಕೈವಾಕ್‍ಗಳ ಪೈಕಿ ಎರಡು ಸ್ಕೈವಾಕ್‍ಗಳಿಗೆ ಟೆಂಡರ್ ಕೊಡಿಸಿದ್ದರು ಎನ್ನಲಾಗಿದೆ.

ಐಎಂಎ ಕಂಪನಿ ಜೊತೆ ಸೇರಿ ನಗರದಲ್ಲಿ ಸ್ಕೈವಾಕ್‍ಗಳನ್ನು ನಿರ್ಮಿಸುವುದಾಗಿ ಅಡೋನಿ ಕಂಪನಿ ದಾಖಲೆಗಳಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ. ಸಂಪತ್‍ರಾಜ್ ಅವರ ಅವಧಿಯಲ್ಲೇ ಈ ಕಂಪನಿಗೆ ಸ್ಕೈವಾಕ್ ನಿರ್ಮಾಣಕ್ಕೆ ಟೆಂಡರ್ ಸಿಕ್ಕಿದೆ ಎಂದು ಕೆಲ ಕಾಪೆರ್ರೇಫೋಟ್‍ಗಳೇ ಹೇಳುತ್ತಾರೆ.

ಐಎಂಎ ಕಂಪನಿ ವಂಚನೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್ ಫೋನ್ ಸ್ವೀಚ್ ಆಫ್ ಆಗಿದೆ. ತಮ್ಮ ಬಾಮೈದುನನ ಅಡೋನೈ ಕಂಪನಿ ಮೂಲಕ ಐಎಂಎಗೆ ಟೆಂಡರ್ ಕೊಡಿಸಿ ಅನಾವಶ್ಯಕ ಕಡೆಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ.

ಜಾಹೀರಾತು ಬೈಲಾ ಉಲ್ಲಂಘನೆ ಮಾಡಿ ತರಾತುರಿಯಲ್ಲಿ ಟೆಂಡರನ್ನು ಸಂಪತ್‍ರಾಜ್ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಈಗ ಅವರು ಯಾರ ಸಂಪರ್ಕಕ್ಕೂ ಸಿಗದಿರುವುದು ಅಚ್ಚರಿ ಮೂಡಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ