“ಕಾಂಗ್ರೆಸ್ ಹೇಳಿದಂತೆ ನಾವು ಸರ್ಕಾರ ನಡೆಸಲು ಆಗುವುದಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಕಾಂಗ್ರೆಸ್‍ನವರು ಹೇಳಿದಂತೆ ಕೇಳಿಕೊಂಡು ನಾವು ಸರ್ಕಾರ ನಡೆಸಲು ಆಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ಹೆದರಿ ಕೊಂಡು ಕೂರಲು ಆಗುತ್ತಾ ಎಂದು ಪ್ರಶ್ನಿಸಿದರು.

ಎಪಿಎಂಸಿ ಕಾಯ್ದೆಯಿಂದ ಯಾವ ರೈತರಿಗೂ ನಷ್ಟವಿಲ್ಲ. ನಮ್ಮ ಬೆಳೆ ನಮ್ಮ ಹಕ್ಕು ಎಂದು ರೈತ ಎಲ್ಲಿಬೇಕಾದರೂ ಫಸಲನ್ನ ಮಾರಾಟ ಮಾಡಬಹುದು. ರೈತರು ತಮ್ಮ ಬೆಳೆಯನ್ನು ಮನೆಯಲ್ಲಾದರೂ ಮಾರಿಕೊಳ್ಳಲಿ, ಬೀದಿಯಲ್ಲಾದರೂ ಮಾರಿಕೊಳ್ಳಲಿ ಎಂದರು.

ಮೊದಲು ಎಪಿಎಂಸಿ ಅಧಿಕಾರಿಗಳು ಬೇರೆ ಕಡೆ ಮಾರಾಟ ಮಾಡಿದರೆ ದಂಡ ಹಾಕುತ್ತಿದ್ದರು. ಈಗ ದಂಡ ಹಾಕುವಂತಿಲ್ಲ. ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದೆ. ಯಾವ ರೀತಿ ಅನ್ಯಾಯವಾಗುತ್ತಿದೆ ಎಂಬುದನ್ನು ಹೇಳಲಿ ಎಂದರು.

Facebook Comments