‘ನಾನು ಅತೃಪ್ತರ ಗುಂಪಲ್ಲಿಲ್ಲ, ರಾಜೀನಾಮೆ ಕೊಡಲ್ಲ’ : ಬಿ.ಸಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.1- ನಾನು ಯಾವುದೇ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿಲ್ಲ. ಆನಂದ್‍ಸಿಂಗ್ ರಾಜೀನಾಮೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಕಾಂಗ್ರೆಸ್‍ನ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮನೆಯಲ್ಲೇ ಇದ್ದೇನೆ. ಆದರೂ ಬಿ.ಸಿ.ಪಾಟೀಲ್ ರಾಜೀನಾಮೆ ಎಂಬ ಸುದ್ದಿಗಳು ಹರಡಿವೆ. ನಾನು ರಾಜೀನಾಮೆ ಕೊಡುವುದಿಲ್ಲ.

ಯಾವುದೇ ಭಿನ್ನಮತೀಯ ಸಭೆಗಳಲ್ಲೂ ನಾನು ಭಾಗವಹಿಸಿಲ್ಲ. ಭಾಗವಹಿಸುವುದೂ ಇಲ್ಲ. ಸಚಿವ ಸ್ಥಾನಕ್ಕೆ ಸಿಗದೇ ಇರುವುದಕ್ಕೆ ನನಗೆ ಬೇಸರವಾಗಿದೆ. ಹಾಗೆಂದು ಭಿನ್ನಮತೀಯ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.  ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ನಾನು ಕೈ ಜೋಡಿಸಿಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಿಪಡಿಸಿದರು.

ಬಿಜೆಪಿ ಸೇರಲ್ಲ ಅಮರೇಗೌಡ ಬಯ್ಯಾಪುರ : ತಾವು ಬಿಜೆಪಿ ಸೇರುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನ ಬೇಸರವಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗುತ್ತೇನೆ ಹೊರತು ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.

ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ಅವರಿಗೆ ಬಿಜೆಪಿ ಇಷ್ಟವಾಗಿರಬಹುದೇನೋ ಎಂದರು.

Facebook Comments

Sri Raghav

Admin