ಕೋಚ್ ಹುದ್ದೆಗೆ ಕುಂಬ್ಳೆ, ಲಕ್ಷ್ಮಣ್ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.18-ರವಿಶಾಸ್ತ್ರಿ ಅವರಿಂದ ತೆರವಾಗುವ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಅಲಂಕರಿಸುವಂತೆ ಅನಿಲ್‍ಕುಂಬ್ಳೆ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ಕೇಳಿಕೊಳ್ಳುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ನಂತರ ಕೋಚ್ ಹುದ್ದೆಯಿಂದ ರವಿಶಾಸ್ತ್ರಿ ಕೆಳಗಿಳಿಯುವುದರಿಂದ ತೆರವಾಗುವ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕುಂಬ್ಳೆ ಹಾಗೂ ಲಕ್ಷ್ಮಣ್ ಅವರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮನವಿ ಮಾಡಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ 2016-17 ನೆ ಸಾಲಿನಲ್ಲಿ ಕುಂಬ್ಳೆ ಅವರು ಕೋಚ್ ಹುದ್ದೆ ನಿಭಾಯಿಸಿದ್ದರು. ಆದರೆ, ಕೋಹ್ಲಿ ಮತ್ತು ಕುಂಬ್ಳೆ ನಡುವೆ ಬಿರುಕು ಕಾಣಿಸಿಕೊಂಡಿದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತೆ ಶಾಸ್ತ್ರಿ ಕೋಚ್ ಆಗಿ ಮುಂದುವರೆದಿದ್ದರು. ಐಪಿಲ್‍ನಲ್ಲಿ ಸನ್‍ರೈಸರ್ ಹೈದರಾಬಾದ್ ಮೆಂಟರ್ ಆಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ್ ಹಾಗೂ ಕುಂಬ್ಳೆ ಅವರನ್ನು ಮತ್ತೆ ಕೋಚ್ ಹುದ್ದೆಗೆ ಪರಿಗಣಿಸಲು ಬಿಸಿಸಿಐ ತೀರ್ಮಾನಿಸಿದೆ.

Facebook Comments