ಗ್ಲೌಸ್‍ನಲ್ಲಿ ಬದಲಿಸಿ ಎಂದ ಐಸಿಸಿ, ಧೋನಿ ಪರ ನಿಂತ ಬಿಸಿಸಿಐ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.7- ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ಭಾರತದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಮ್ಮ ಗ್ಲೌಸ್‍ನಲ್ಲಿ ಸೈನ್ಯದ ಬ್ಯಾಡ್ಜ್ ಚಿತ್ರವನ್ನು ಅಳವಡಿಸಿಕೊಳ್ಳಲು ಅನುಮತಿ ನೀಡಲು ಐಸಿಸಿಗೆ ಪತ್ರ ಬರೆಯುವುದಾಗಿ ಬಿಸಿಸಿಐನ ಮುಖ್ಯಸ್ಥ ವಿನೋದ್‍ರಾಯ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಶ್ವಾಸನೀಯ ಮೂಲಗಳ ಪ್ರಕಾರ ಬಿಸಿಸಿಐ ಧೋನಿಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದ್ದು ಐಸಿಸಿ ಸಲಹೆಯನ್ನು ತಿರಸ್ಕರಿಸಲು ಮುಂದಾಗಿದೆ. ಈ ಕುರಿತಂತೆ ಕಮಿಟಿ ಆಫ್ ಆಡ್ಮಿನಿಸ್ಟ್ರೇಟರ್ಸ್ ನ ಅಧ್ಯಕ್ಷ ವಿನೋದ್ ರಾಯ್ ಧೋನಿಗೆ ಸೇನಾ ಬಲಿದಾನದ ಬ್ಯಾಡ್ಜ್ ನ್ನು ಧರಿಸಿ ಪಂದ್ಯವನ್ನಾಡಲು ಅನುಮತಿ ನೀಡಬೇಕೆಂದು ಬಿಸಿಸಿಐ ಐಸಿಸಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಎಂಎಸ್​ ಧೋನಿ ಟೊಟ್ಟಿದ್ದ ಗ್ಲೌಸ್​ನಲ್ಲಿ ಭಾರತೀಯ ಸೇನೆಯ ‘ಬಲಿದಾನ್’​ ಚಿನ್ಹೆ ಇತ್ತು. ಇದಕ್ಕೆ ಐಸಿಸಿ ಅಪಸ್ವರ ಎತ್ತಿದೆ. ಈ ಬಗ್ಗೆ ಬಿಸಿಸಿಐಗೆ ಸೂಚನೆ ನೀಡಿರುವ ಐಸಿಸಿ, ಧೋನಿ ಗ್ಲೌಸ್​ನಲ್ಲಿ ಈ ಚಿನ್ಹೆ ತೆಗೆದು ಹಾಕಿ. ಈ ರೀತಿ ಚಿಹ್ನೆ ಧರಿಸಬೇಕಾದರೆ ತಂಡ ಅಥವಾ ಆಟಗಾರ ಐಸಿಸಿಯಿಂದ ಮೊದಲೇ ಅನುಮತಿ ಪಡೆಯಬೇಕು. ಧೋನಿ ಧರಿಸಿರುವುದು ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ಈ ವಿಚಾರ ವಿಚಾರ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಅದನ್ನು ತೆಗೆಯುವಂತೆ ಐಸಿಸಿ ಸೂಚಿಸಿದ್ದು, ಇದಕ್ಕೆ ಭಾರತೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಚ್ಚರಿ ಎಂದರೆ ಭಾರತದ ಮಾಜಿ ಫುಟ್​ಬಾಲ್​ ಆಟಗರನೋರ್ವ ಈ ವಿಚಾರದಲ್ಲಿ ಧೋನಿಗೆ ಕಿವಿಮಾತು ಹೇಳಿದ್ದಾರೆ. ಕ್ರೀಡೆಯನ್ನು ಗೌರವಿಸಿ ಎಂದು ಅವರು ಸೂಚಿಸಿದ್ದಾರೆ.

ಮಾಜಿ ಫುಟ್​ಬಾಲ್​ ಆಟಗಾರ ಬೈಚುಂಗ್​ ಭುಟಿಯಾ ಈ ಬಗ್ಗೆ ಮಾತನಾಡಿದ್ದು, “ಪ್ರತಿ ಆಟಗಾರನೂ ನೀತಿ-ನಿಯಮಗಳನ್ನು ಪಾಲಿಸಬೇಕು. ಒಂದೊಮ್ಮೆ ಧೋನಿ ಧರಿಸಿದ ಚಿಹ್ನೆ ನಿಯಮಕ್ಕೆ ವಿರುದ್ಧವಾದುದು ಎಂದಾದರೆ ಅದನ್ನು ಅವರು ತೆಗೆಯಬೇಕು. ಉಳಿದ ಎಲ್ಲ ವಿಚಾರಗಳನ್ನು ಬದಿಗಿಟ್ಟು, ಕ್ರೀಡೆಗೆ ಗೌರವ ಸಲ್ಲಿಸಬೇಕು,” ಎಂದು ಕಿವಿಮಾತು ಹೇಳಿದ್ದಾರೆ.

#ವಿಶ್ವಕಪ್‍ನಿಂದ ಶೆಹಜಾದ್ ಹೊರಕ್ಕೆ :  ಲಂಡನ್, ಜೂ.7- ಮಂಡಿ ನೋವಿನಿಂದ ಬಳಲುತ್ತಿರುವ ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ಶೆಹಜಾದ್À ವಿಶ್ವಕಪ್‍ನಿಂದ ಹೊರಕ್ಕೆ ನಡೆದಿದ್ದಾರೆ.  ಶೆಹಜಾದ್ ಬದಲಿಗೆ ಯುವ ಆಟಗಾರ ಇಕ್ರಾಂ ಅಲಿ ಖಿಲ್ ತಂಡವನ್ನು ಕೂಡಿಕೊಂಡಿದ್ದಾರೆ ಎಂದು ತಂಡದ ಕೋಚ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ