ಬಿಡಿಎ ನೌಕರರ ಸಂಘದ ಪದಾಧಿಕಾರಿಗಳಿಗೆ ಎಸ್.ಆರ್.ವಿಶ್ವನಾಥ್ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.24- ಬಿಡಿಎ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಅವರು ಅಭಿನಂದಿಸಿದರು. ಆಮಂಜುನಾಥ್ ನೇತೃತ್ವದಲ್ಲಿ ಸಂಘದ 17 ಸದಸ್ಯರ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಮುಂದಿನ ಮೂರು ವರ್ಷಗಳವರೆಗೆ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದೆ.

ವಿಶ್ವನಾಥ್ ಅವರು ಮಾತನಾಡಿ, ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯಿಮದಾಗಿ ಕಳೆದ ಹಲವು ವರ್ಷಗಳಿಂದ ಸಂಸ್ಥೆಗೆ ಕೆಟ್ಟ ಹೆಸರು ಬಂದಿದೆ. ಈ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಕಾರ್ಯಗಳನ್ನು ಮಾಡೋಣ ಎಂದು ಹೇಳಿದರು.

ಪ್ರಾಧಿಕಾರದಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಯಿಂದ ನನಗೊಬ್ಬನಿಗಷ್ಟೇ ಅಲ್ಲ, ಇಡೀ ಪ್ರಾಧಿಕಾರದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ನೋವು ತಂದಿದೆ. ಹಿಂದೆ ಇದ್ದ ಅಧಿಕಾರಿಗಳು ಮಾಡಿ ಹೋಗಿರುವ ತಪ್ಪಿನ ಕಳಂಕವನ್ನು ಹಾಲಿ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರಬೇಕಾದ ಪರಿಸ್ಥಿತಿ ಬಂದಿದೆ.

ಹೀಗಾಗಿ, ಯಾವೊಬ್ಬ ಸಿಬ್ಬಂದಿಯೂ ಸಹ ಇಂತಹ ಕಳಂಕವನ್ನು ತಂದುಕೊಳ್ಳುವ ಪರಿಸ್ಥಿತಿಗೆ ಆಸ್ಪದ ಕೊಡಬಾರದು. ಈ ವಿಚಾರದಲ್ಲಿ ನೌಕರರ ಸಂಘವೂ ಕೈಜೋಡಿಸಿ ಸಂಸ್ಥೆಗೆ ಹಿಂದಿನ ಖ್ಯಾತಿಯನ್ನು ತರುವಂತೆ ಮಾಡಬೇಕೆಂದು ಸೂಚಿಸಿದರು.

ಇದೇ ವೇಳೆ ಪ್ರಾಧಿಕಾರದ ನೌಕರರ ಹಿತ ಕಾಪಾಡಲು ಎಲ್ಲಾ ರೀತಿಯ ಸಹಕಾರ ನೀಡಲು ನಾನು ಬದ್ಧನಾಗಿದ್ದೇನೆ. ಅದೇ ರೀತಿ, ಸಂಸ್ಥೆಯ ಉನ್ನತಿಗೆ ನಾನು ಮತ್ತು ಆಯುಕ್ತರು ಹಾಕುತ್ತಿರುವ ಶ್ರಮಕ್ಕೆ ನಿಮ್ಮ ಸಹಕಾರವನ್ನು ಕೋರುವೆ ಎಂದು ತಿಳಿಸಿದರು.

Facebook Comments