ಅಂತರಿಕ್ಷದಿಂದ ಭೂಮಿ ಹೇಗೆ ಕಾಣುತ್ತೆ..? ISS ರವಾನಿಸಿದ ಈ ಅದ್ಭುತ ದೃಶ್ಯಗಳನ್ನೊಮ್ಮೆ ಕಣ್ತುಂಬಿಕೊಳ್ಳಿ

ಈ ಸುದ್ದಿಯನ್ನು ಶೇರ್ ಮಾಡಿ

ಐಎಸ್‌ಎಸ್, ನ.11-ಭೂಮಿಯಿಂದ ಸುಮಾರು 250 ಮೈಲಿಗಳ ದೂರದಲ್ಲಿರುವ ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣ(ಇಂಟರ್‌ನ್ಯಾಷನಲ್ ಸ್ಪೆಸ್ ಸ್ಟೇಷನ್-ಐಎಸ್‌ಎಸ್) ಖಗೋಳ ವಿಜ್ಞಾನಿಗಳು ರವಾನಿಸಿರುವ ಭೂಮಂಡಲದ ಅದ್ಭುತ ಫೋಟೋಗಳು ನಯನ ಮನೋಹವಾಗಿದೆ.

ವ್ಯೂಮಾಯಾತ್ರಿಕರು ವಸುಂಧರೆಯ 44 ಸುಂದರ ಫೋಟೊಗಳನ್ನು ಹೈರೆಸೆಲ್ಯೂಷನ್ ಕ್ಯಾಮೆರಾದಲ್ಲಿ ವಿವಿಧ ಕೋನಗಳಲ್ಲಿ ಸೆರೆ ಹಿಡಿದು ಭೂಮಿಗೆ ರವಾಸಿಸಿದ್ದಾರೆ. ಅಂತರಿಕ್ಷದಿಂದ ಇಳೆಯ ಸೊಬಗು ಯಾವ ರೀತಿ ಕಾಣುತ್ತದೆ ಎಂಬುದನ್ನು ಈ ದೃಶ್ಯ ಚಿತ್ತಾರದ ಮೂಲಕ ಕಣ್ತುಂಬಿಕೊಳ್ಳಬಹುದು.

ಕೆಲವು ಫೋಟೋಗಳು ನಯನ ಮನೋಹರವಾಗಿದ್ದರೆ, ಇನ್ನೂ ಹಲವು ಚಿತ್ರಗಳು ರುದ್ರರಮಣೀಯ. ಧರಣಿ ಭೂರಮೆಯ ದೃಶ್ಯ ಸೊಬಗು ಚೇತೋಹಾರಿಯಾಗಿದೆ. ಇದು ಖಗೋಳ ಆಸಕ್ತರು, ಪರಿಸರ ಪ್ರೇಮಿಗಳು, ಮತ್ತು ನಿಸರ್ಗ ಆರಾಧಕರೂ ಸೇರಿದಂತೆ ಎಲ್ಲರನ್ನು ಬಹುವಾಗಿ ಆಕರ್ಷಿಸಿದೆ.

ನಿಸರ್ಗದ ಕ್ಯಾನ್ವಾಸ್‌ನಲ್ಲಿ ಮೂಡಿಬಂದಿರುವ ಸ್ವಾಭಾವಿಕ ಚಿತ್ರಗಳನ್ನು ವೈಭವ ಇಲ್ಲುಂಟು. ಭೂಮಿಯ ಒಡಲಿನಲ್ಲಿರುವ ಅಗಾಧ ಸೌಂದರ್ಯರಾಶಿಯ ತುಣುಕುಗಳು ವಿಸ್ಮಯ-ವಿಶಿಷ್ಟ.
ಭೂಮಿಯಿಂದ ಸುಮಾರು ೨೫೦ ಮೈಲಿಗಳ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಗಂಟೆಗೆ 17,300 ಮೈಲಿ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು ಪ್ರತಿ 90 ನಿಮಿಷದಲ್ಲಿ ಭೂಮಿಯನ್ನು ಪ್ರದಕ್ಷಿಣೆ ಹಾಕುತ್ತಿದೆ.

 

 

 

 

 

Facebook Comments

Sri Raghav

Admin