ಹೆಜ್ಜೇನು ದಾಳಿ, 30ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಮಧುಗಿರಿ, ಮೇ 19-ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಹೆಜ್ಜೇನು ದಾಳಿಯಿಂದಾಗಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಜೇನು ಹುಳುಗಳ ದಾಳಿಯಿಂದ ಧನುಶ್, ಮಹಲಿಂಗಪ್ಪ, ಬೋಜರಾಜು, ಹನುಮಂತರಾಯ್ಯಪ್ಪ, ಲೋಕೆಶ್, ರಾಮಣ್ಣ, ಪುಟ್ಟಮ್ಮ. ಮಾನ್ಯ, ವಿನೋಧ, ಪಟ್ಟಕ್ಕ, ಪುಟ್ಟಸ್ವಾಮಿ, ಮಾರಪ್ಪ, ಲಕ್ಷ್ಮಮ್ಮ, ಸರೋಜಮ್ಮ ಎಂಬುವವರು ಗಾಯಗೊಂಡಿದ್ದಾರೆ.

ತಾಲ್ಲೂಕಿನ ವಜ್ರದಹಳ್ಳಿ ಗ್ರಾಮದವರಾಗಿದ್ದು ವೆಂಕಟಾಪುರ ಗ್ರಾಮದ ಓಬಳ ನರಸಿಂಹಸ್ವಾಮಿ ದೇವಾಲಯಕ್ಕೆ ಮಂಡೆ ಕೊಡುವ ಕಾರ್ಯಕ್ರಮಕ್ಕೆ ಹೋಗಿದ್ದು ಮರದ ಕೆಳೆಗೆ ಪೂಜೆ ಮಾಡಲು ದೂಪ ಹಚ್ಚಿದ ಸಂದರ್ಭದಲ್ಲಿ ಹೊಗೆಯು ಹೆಚ್ಚಿ ಮರದ ಮೇಲಿದ್ದ ಹೆಜ್ಜೇನು ಹುಳುಗಳು ಎದ್ದು ದಾಳಿ ನಡೆಸಿವೆ.

ಜೇನು ಹುಳುಗಳ ದಾಳಿಯಿಂದಾಗಿ ತಪ್ಪಿಸಿಕೊಳ್ಳಲು ಪೂಜೆಯಲ್ಲಿ ತಲ್ಲೀನರಾಗಿದ್ದವರು ಗಾಬರಿಯಿಂದ ದಿಕ್ಕಾಪಾಲಾಗಿ ಓಡಿದರೂ ಕೂಡ ಜೇನು ಹುಳುಗಳು ಕಚ್ಚಿ ಗಾಯಗೊಳಿಸಿವೆ.

ಅಕ್ಕ ಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸುವ ಜೊತೆಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ನೆರವಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin