ವಿಧಾನಸೌಧದಲ್ಲಿ ಬಿಯರ್ ಬಾಟಲ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಆಡಳಿತದ ಕೇಂದ್ರ ಸ್ಥಾನವಾದ ವಿಧಾನಸೌಧದಲ್ಲಿ ಬಿಯರ್ ಬಾಟಲ್‍ಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿಧಾನಸೌಧದ ಎರಡನೆ ಮಹಡಿಯ ಕೊಠಡಿ ಸಂಖ್ಯೆ 209ರ ಬಳಿ ಬಿಯರ್ ಬಾಟಲ್‍ಗಳು ಪತ್ತೆಯಾಗಿವೆ.

ಕುಡಿಯುವ ನೀರಿನ ಸ್ಥಳದಲ್ಲಿ ಬಾಟಲ್‍ಗಳು ಕಂಡು ಬಂದಿರುವುದು ಅನುಮಾನಗಳಿಗೆ ಅವಕಾಶ ಕಲ್ಪಿಸಿದೆ. ಕುಡಿಯುವ ನೀರಿನ ಸ್ಥಳದಲ್ಲಿ ಬಾಟಲ್‍ಗಳು ಹೇಗೆ ಬಂದವು, ಯಾರು ತಂದಿಟ್ಟರು ಎಂಬುದು ಯಾವುದೂ ಕೂಡ ಸ್ಪಷ್ಟವಾಗಿಲ್ಲ.

Facebook Comments