ಭಾರೀ ಸ್ಫೋಟಕ್ಕೆ ತತ್ತರಿಸಿದ ಬೈರುತ್ : 100ಕ್ಕೂ ಹೆಚ್ಚು ಬಲಿ, ಸಾವಿರಾರು ಮಂದಿಗೆ ಗಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೈರುತ್, ಆ.5-ಲೆಬನಾನ್ ರಾಜಧಾನಿ ಬೈರುತ್‍ನಲ್ಲಿ ನಿನ್ನೆ ಸಂಭವಿಸಿದ ಭಾರೀ ಅವಳಿ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಬಲಿಯಾಗಿ, ಸುಮಾರು 4,000 ಜನರು ಗಾಯಗೊಂಡಿದ್ದಾರೆ.

ಈ ವಿನಾಶಕಾರಿ ಸ್ಫೋಟಕ್ಕೆ ಉಗ್ರಗಾಮಿಗಳ ದಾಳಿ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸದಾ ಅಂತರಿಕ ಕಲಹ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ನಲುಗುತ್ತಿರುವ ಲೆಬನಾನ್‍ನಲ್ಲಿ ನಿನ್ನೆ ನಡೆದ ಭಾರೀ ಸ್ಪೋಟದಿಂದ ಜನರ ಭಯಭೀತರಾಗಿದ್ದಾರೆ.

ರಾಜಧಾನಿಯ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿದ್ದು, ಅವರ ಕುಟುಂಬದವರು ಮತ್ತು ಬಂಧುಮಿತ್ರರ ಆಕ್ರಂದನ ಮುಗಿಲು ಮುಟ್ಟಿದೆ.
ಈ ದುರ್ಘಟನೆಯಲ್ಲಿ ಸುಮಾರು 4000 ಮಂದಿ ಗಾಯಗೊಂಡಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ.

ಸ್ಫೋಟದಿಂದ ನೂರಾರು ಗಾಯಾಳುಗಳಿಗೆ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ರಕ್ತದಾನ ಮಾಡುವಂತೆ ಆಸ್ಪತ್ರೆಗಳ ವೈದ್ಯರು ಜನರಲ್ಲಿ ಮನವಿ ಮಾಡಿದ್ಧಾರೆ. ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ದಾಗುವ ಆತಂಕವಿದೆ.

ಸ್ಪೋಟದ ತೀವ್ರಗೆಗೆ ಬೈರುತ್‍ನ ಐತಿಹಾಸಿಕ ಕೋಟೆ ಕೊತ್ತಲಗಳು ಮತ್ತು ಪ್ರಸಿದ್ಧ ಸ್ಮಾರಕಗಳಿಗೆ ಹಾನಿಯಾಗಿದ್ದು, ಅನೇಕ ಕಟ್ಟಡಗಳು ಧ್ವಂಸಗೊಂದಿದ್ದು, ಸಾವಿರಾರು ಮನೆಗಳಿಗೆ ಹಾನಿಯಾಗಿಸವೆ.

ಬೈರತ್ ನಗರದ ಅರ್ಧಕ್ಕಿಂತಲೂ ಹೆಚ್ಚು ಭಾಗ ನಿರ್ನಾಮಗೊಂಡಿದೆ. ಸುಮಾರು 200 ಕಿ.ಮೀ. ದೂರದವರೆಗೂ ಶಬ್ಧ ಕೇಳಿಸುವಷ್ಟು ಭಾರೀ ಸ್ಪೋಟದ ತೀವ್ರತೆ ಇತ್ತು.

ಬಂದರು ಸಮೀಪದಲ್ಲೇ ನಡೆದ ಸ್ಫೋಟದಿಂದ ಭುಗಿಲೆದ್ದ ಅಗ್ನಿ ಜ್ವಾಲೆಗಳು ಮುಗಿಲೆತ್ತರಕ್ಕೆ ರಾಚಿತು. ಈ ಸ್ಫೋಟದ ತೀವ್ರತೆಗೆ ಸಮುದ್ರದ ನೀರು ನೂರಾರು ಮೀಟರ್‍ಗಳ ಎತ್ತರ ಮತ್ತು ದೂರಕ್ಕೆ ಚಿಮ್ಮಿದ ದೃಶ್ಯಗಳು ವಿಡಿಯೋದಲ್ಲಿವೆ.

ಅವಳಿ ಸ್ಫೋಟದ ನಂತರ ಆಗಸಕ್ಕೆ ಏರಿದ ಬೆಂಕಿಯ ಜ್ವಾಲೆಗಳು ಮತ್ತು ದಟ್ಟ ಹೊಗೆ ಅಣುಬಾಂಬ್ ಸ್ಫೋಟದಂಥ ದೃಶ್ಯವನ್ನು ನೆನೆಪಿಸುವಂತಿದೆ.ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದ್ದು, ಇಡೀ ನಗರದಲ್ಲಿ ಭದ್ರತಾಪಡೆಗಳು ವಾಸ್ತವ್ಯ ಹೂಡಿವೆ. ಸೇನಾ ಹೆಲಿಕಾಪ್ಟರ್‍ಗಳನ್ನು ತುರ್ತು ಸೇವೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ.

ಭಯೋತ್ಪಾದನೆ ಕೃತ್ಯ ಶಂಕೆ: ಬೈರುತ್‍ನಲ್ಲಿ ನಡೆದ ಭಾರೀ ಸ್ಪೋಟಕ್ಕೆ ನಿಖರವಾದ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ ಈ ಅವಳಿ ಸ್ಪೋಟಕ್ಕೆ ಉಗ್ರಗಾಮಿಗಳ ಕೃತ್ಯ ಕಾರಣ ಎಂಬ ಸಂಶಯ ಬಲವಾಗಿದೆ.

ಬೈರುತ್‍ನಲ್ಲಿ ನಡದ ಭಾರೀ ಸ್ಪೋಟಕ್ಕೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರೆಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಅನೇಕ ನಾಯಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin